ಮಡಂತ್ಯಾರು: ಇಲ್ಲಿಯ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಭೇಟಿ ನೀಡುವ ಸಂದರ್ಭವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಮಡಂತ್ಯಾರು ಗ್ರಾಮ ಪಂಚಾಯತ್ಗೆ ನ.29ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ ಕುಕ್ಕಳ, ಜಿ.ಪಂ ಸದಸ್ಯೆ ಮಮತಾ ಎಮ್ ಶೆಟ್ಟಿ, ತಾ.ಪಂ ಸದಸ್ಯೆ ವಸಂತಿ ಲಕ್ಷ್ಮಣ ಕುಲಾಲ್, ಪುಂಜಾಲಕಟ್ಟೆ ಉಪನಿರೀಕ್ಷಕಿ ಸೌಮ್ಯಲತಾ, ಅಭಿವೃದ್ಧಿ ಅಧಿಕಾರಿ ನಾಗೇಶ್ ಎಮ್, ಪಂ ಸದಸ್ಯರು, ಪಂ. ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.