ಗ್ರಾ.ಪಂ ನಡ: ಮಕ್ಕಳ ಗ್ರಾಮಸಭೆ

ನಡ: ನಡ ಗ್ರಾ.ಪಂ ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯು ಅಂಬೇಡ್ಕರ್ ಸಮಾಜ ಭವನದಲ್ಲಿ ನ.28ರಂದು ಜರುಗಿತು.


ಸಭೆಯ ಅಧ್ಯಕ್ಷತೆಯನ್ನು ನಡ ಪ್ರೌಢಶಾಲಾ ವಿದ್ಯಾರ್ಥಿ ನಾಗರಾಜ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಪೂರ್ಣಿಮಾ, ಉಪಾದ್ಯಕ್ಷ ಸುಧಾಕರ್ ಎಸ್.ಕೆ, ಪಂ ಅಧಿಕಾರಿ ಶ್ರೀನಿವಾಸ್ ಡಿ .ಪಿ, ಕಾರ್ಯದರ್ಶಿ ಕಿರಣ್ ಎಂ, ತಾಲೂಕು ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ರತ್ನಾವತಿ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಜಾಕೀರ್ ಹುಸೇನ್, ಇಂದಬೆಟ್ಟು ಆರೋಗ್ಯ ಇಲಾಖೆಯ ರಕ್ಷಿತ್,ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆ ಕಾರ್ಯಕರ್ತೆ,ವಿಮುಕ್ತಿ ಸಂಸ್ಥೆಯ ಶಿಕ್ಷಣ ಸಂಯೋಜಕರು, . ಗ್ರಾ.ಪಂ ಸದಸ್ಯರು, ಶಾಲಾ ಮಕ್ಕಳು, ಪಂ.ಸಿಬ್ಬಂಧಿ ವರ್ಗ, ಶಾಲಾ ಅಧ್ಯಾಪಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಹಿ.ಪ್ರಾ ಶಾಲೆ ನಡ ಮಕ್ಕಳಿಂದ ಪ್ರಾರ್ಥನೆಯನ್ನು ನೆರವೇರಿಸಿದರು. ಮಂಜೊಟ್ಟಿ ಹಿ.ಪ್ರಾ ಶಾಲೆ ವಿದ್ಯಾರ್ಥಿ ಆದಿಲ್ ಸ್ವಾಗತಿಸಿ, ಹಿ.ಪ್ರಾ.ಶಾಲೆ ನಡ ಮಹಮ್ಮದ್ ಅಕ್ಬಲ್ ಕಾರ್ಯಕ್ರಮ ನಿರೂಪಿಸಿ, ಶಿಲ್ಪಾ ಧನ್ಯವಾದವಿತ್ತರು. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.