ಬಹುಮುಖ ಪ್ರತಿಭೆ ವಸಂತಿ ಟಿ. ನಿಡ್ಲೆ ಯವರಿಗೆ “ಕರುನಾಡ ರಾಜ್ಯೋತ್ಸವ” ರಾಜ್ಯ ಪ್ರಶಸ್ತಿ

ನಿಡ್ಲೆ: ನಿಡ್ಲೆ ಗ್ರಾಮದ ಕೈರೋಳಿ ಮನೆ ದಿ. ಮುದರ ಮತ್ತು ದಿ. ಕಾಳಿಯಮ್ಮ ದಂಪತಿ ಪುತ್ರಿ, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ವಸಂತಿ ಟಿ ನಿಡ್ಲೆ ಯವರಿಗೆ ಶ್ರೀ ಲಕ್ಕಮ್ಮದೇವಿ ಕಲಾಪೋಷಕ ಸಂಘ ಬ್ಯಾಕೂಡ ಇವರು ಕೊಡಮಾಡಿದ “ಕರುನಾಡ ರಾಜ್ಯೋತ್ಸವ” ರಾಜ್ಯಪ್ರಶಸ್ತಿ ಲಭಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ನಡೆದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ದ್ವಿತೀಯ ಸಮ್ಮೇಳನದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಗಣ್ಯರ ಸಮಕ್ಷಮ ನೀಡಿ ಪುರಸ್ಕರಿಸಲಾಯಿತು.
ವೃತ್ತಿಯಲ್ಲಿ ಶಿಕ್ಷಕಿಯಾಗಿ ಪ್ರವೃತ್ತಿಯಲ್ಲಿ ಲೇಖಕಿ, ಕವಯತ್ರಿ, ಕತೆಗಾರ್ತಿ, ಯಕ್ಷಗಾನ ಕಲಾವಿದೆಯಾಗಿ ಗುರುತಿಸಿಕೊಂಡಿರುವ ವಸಂತಿ ಟಿ ನಿಡ್ಲೆ ಅವರು ಪ್ರಸ್ತುತ ಸರಕಾರಿ ಹಿ. ಪ್ರಾ. ಶಾಲೆ ಕೆಮ್ಮಟೆಯಲ್ಲಿ ಶಿಕ್ಷಕಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.
ನಿಡ್ಲೆ ಗ್ರಾಮದ ಪ್ರಥಮ ಮಹಿಳಾ ಸಾಹಿತಿ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು ನಿಡ್ಲೆ ಮತ್ತು ವಾಣಿ ಸಂಸ್ಥೆಯಲ್ಲಿ ಪೂರ್ವ ವಿದ್ಯಾಭ್ಯಾಸ ಪಡೆದು ವಿವೇಕಾನಂದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಪುತ್ತೂರು ಇಲ್ಲಿ ಶಿಕ್ಷಕರ ತರಬೇತಿ ಪಡೆದಿದ್ದಾರೆ. ಮೈಸೂರು ಮುಕ್ತ ವಿ.ವಿ ಯಿಂದ ಪದವಿ, ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹಿಂದಿ ಪ್ರಚಾರ ಪರಿಷತ್ ಬೆಂಗಳೂರು ಇಲ್ಲಿಂದ ಹಿಂದಿ ರತ್ನ ಪದವಿ ಪೂರೈಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.