ಬಳಂಜ : ಮಂಗಳೂರಿನ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ವೆಸ್ಟರ್ನ್ ಕಪ್ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಳಂಜದ ಸಾನ್ವಿ ಕೋಟ್ಯಾನ್ ವೈಟ್ ಬೆಲ್ಟ್ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿದ್ದಾರೆ.
ಇವರು ನೆಲ್ಯಾಡಿ ಜ್ಞಾನೋದಯ ಬೆಥನಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನಾಲ್ಕೂರು ಗ್ರಾಮದ ಪುಣ್ಕೆದೊಟ್ಟು ಮನೆಯ ಸೌಮ್ಯ ಮತ್ತು ಯಶವಂತ್ ದಂಪತಿ ಪುತ್ರಿ.