ಡಿ.1: ವಾಣಿ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ನೂತನ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿಯ ಈಗಾಗಲೇ ನಾಲ್ಕು ತಿಂಗಳ ಕಾರ್ಯಚರಣೆಗೆ ಆರಂಭಿಸಿದ ವಾಣಿ ಕೋ-ಆಪರೇಟಿವ್ ಲಿಮಿಟೆಡ್ ಇದರ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಡಿ.1 ರಂದು ವಾಣಿ ವಿದ್ಯಾಸಂಸ್ಥೆ ವಠಾರದಲ್ಲಿ ನಡೆಯಲಿದೆ ಎಂದು ಸಹಕಾರಿ ನಿಯಮಿತ ಇದರ ಅಧ್ಯಕ್ಷ ಹೆಚ್ ಪದ್ಮಗೌಡ ಬೆಳಾಲು ಇಂದು(ನ.26) ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಬ್ಯಾಂಕಿನ ವ್ಯವಹಾರಗಳು ಆರಂಭವಾಗಿದ್ದು ತಾಲೂಕಿನಾದ್ಯಂತ 3ಸಾವಿರ ಸದಸ್ಯರ ನೊಂದಾವಣೆ ನಡೆದಿದೆ. 2 ಕೋಟಿ ರೂ ಅಧಿಕ ಪಾಲು ಬಂಡವಾಳ ಸಂಗ್ರಹಿಸಲಾಗಿದೆ. 2 ಕೋಟಿ 25 ಲಕ್ಷದಷ್ಟು ಠೇವಣಿಯನ್ನು ಸಂಗ್ರಹಿಸಲಾಗಿದೆ. ಬ್ಯಾಂಕಿನ ವ್ಯವಹಾರವನ್ನು ನಡೆಸಲಾಗುತ್ತಿದ್ದು ಇದರ ಕೇಂದ್ರ ಕಛೇರಿಯ ಪ್ರತ್ಯೇಕ ಕಟ್ಟಡವನ್ನು ಡಿ.1 ರಂದು ಉದ್ಘಾಟನೆಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಂಗಳೂರು ಶಾಖೆಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ.
ನೂತನ ಕಟ್ಟಡವನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಮ್.ಎನ್ ರಾಜೇಂದ್ರ ಕುಮಾರ್ ನೆರವೇರಿಸಲಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಪುತ್ತೂರಿನ ಶಾಸಕ ಸಂಜೀವ ಮಠಂದೂರು, ಮಾಜಿ ಸಚಿವ ಗಂಗಾಧರ ಗೌಡ, ಸುಳ್ಯ ಅಕಾಡೆಮಿ ಆಫ್ ಲಿಬಿರಲ್ ಎಜುಕೇಶನ್ ಡಾ| ಕೆ.ವಿ ಚಿದಾನಂದ ಸಹಿತ ಪ್ರಮುಖ ಗಣ್ಯ ವ್ಯಕ್ತಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ನೆರೆ ಸಂತ್ರಸ್ತರಿಗೆ ಎರಡನೇ ಹಂತದ ಪರಿಹಾರ ವಿತರಣೆ

ಈಗಾಗಲೇ ಗೌಡರ ಯಾನೆ ವಕ್ಕಲಿಗರ ಸೇವಾ ಸಂಘದ ಮೂಲಕ 10ಲಕ್ಷ ರೂಪಾಯಿಗಳನ್ನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ಘೋಷಿಸಿ ಈಗಾಗಲೇ ಮೊದಲ ಹಂತದಲ್ಲಿ 2.40ಲಕ್ಷ ಪರಿಹಾರ ನೀಡಲಾಗಿದೆ. ಉಳಿಕೆ  ಮೊತ್ತವನ್ನು ಎರಡನೇ ಹಂತವಾಗಿ ನೀಡುವ ಕಾರ್ಯಕ್ರಮ ಈ ವೇದಿಕೆಯಲ್ಲಿ ನಡೆಯಲಿದೆ ಎಂದು ಅವರು ವಿವರ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಹಕಾರಿ ನಿಯಮಿತದ ಉಪಾಧ್ಯಕ್ಷ ಕುಶಾಲಪ್ಪ ಗೌಡ, ನಿರ್ದೇಶಕರಾದ ಜಿ ಸೊಮೇಗೌಡ, ಟಿ ಜಯಾನಂದ ಗೌಡ, ಕೆ.ಆರ್ ಸುಬ್ರಹ್ಮಣ್ಯ , ಸುರೇಶ್ ಬಿ ಕೌಡಂಗೆ, ಸಹಕಾರಿ ಸಂಘದ ವಿಶೇಷಾಧಿಕಾರಿ ರುಕ್ಮಯ್ಯ ಗೌಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.