ಬೆಳ್ತಂಗಡಿ: ಇಲ್ಲಿಯ ನೆರಿಯ ಗ್ರಾ.ಪಂ ವ್ಯಾಪ್ತಿಯ ಅಕೋಟೆದಡಿ ದಿ| ಲೋಕಯ್ಯ ಗೌಡರ ಪತ್ನಿ ಗೋಪಿ (55ವ) ಇವರ ಅಸಹಜ ಸಾವು ನ.25 ರಂದು ವರದಿಯಾಗಿದೆ.
ಇವರ ಮೃತ ದೇಹವು ಆತೂರು ನದಿ ಸಮೀಪ ಎರ್ಮಾಯಿ ಕಟ್ಟೆ ಎಂಬಲ್ಲಿ ಕೃಷಿಗಾಗಿ ನಿರ್ಮಿಸಿದ ಸಣ್ಣ ಚೆಕ್ಡ್ಯಾಂ ನಲ್ಲಿ ತೇಲುವ ಸ್ಥಿತಿಯಲ್ಲಿ ಇದ್ದುದನ್ನು ಮನೆಯವರು ನೋಡಿದ್ದರು. ಇವರ ಸಾವು ಹೇಗೆ ಆಗಿದೆ, ಆಕಸ್ಮಿಕವೋ ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತರು ಎರಡು ಗಂಡು ಮಕ್ಕಳಾದ ರಾಧಾಕೃಷ್ಣ ಮತ್ತು ಸತೀಶ, ಪುತ್ರಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.