ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ಅಮೃತವರ್ಷಿಣಿ ಸಭಾಂಗಣದಲ್ಲಿ ಶಾಂತಿಸಂದೇಶ ಸಾರಿದ ಪೌರಾಣಿಕ ನೃತ್ಯರೂಪಕ

Advt_NewsUnder_1
Advt_NewsUnder_1
Advt_NewsUnder_1

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ಅಮೃತವರ್ಷಿಣಿ ಸಭಾಂಗಣದಲ್ಲಿ ಖ್ಯಾತ ಚಲನಚಿತ್ರ ಕಲಾವಿದೆ ಎಂ. ಶಾಂತಲಾ ಹಾಗೂ ಸಂಗಡಿಗರು ನ.24 ರಂದು  ಪ್ರಸ್ತುತಪಡಿಸಿದ ನೃತ್ಯರೂಪಕವು ಶಾಂತಿಯ ಮೌಲಿಕ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು.


ಪುರಾಣದ ವಿವಿಧ ಪ್ರಸಂಗಗಳ ಮೂಲಕ ಸಂಘರ್ಷವನ್ನು ಎದುರಿಸುವ ಬಗೆಯನ್ನು ಕಾಣಿಸಿತು. ಅನ್ಯಾಯದ ವಿರುದ್ಧದ ಹೋರಾಡುವ ಚಿತ್ರಣವನ್ನು ಕಟ್ಟಿಕೊಟ್ಟಿತು.


ಸಾವನೇ ಗೆಲ್ಲಬೇಕು ಎಂದು ಬ್ರಹ್ಮನಲ್ಲಿ ಇಚ್ಛೆ ಇಡುವ ಶುಂಭ-ನಿಶುಂಭರ ಬೇಡಿಕೆಯನ್ನು ನಿರಾಕರಿಸಿದ ಬ್ರಹ್ಮನ ಬಳಿ ಮತ್ತೊಂದು ಬೇಡಿಕೆ ಇಡುತ್ತಾರೆ, ತಾಯಿ ಗರ್ಭದಲ್ಲಿ ಜನಿಸಿರದವಳಿಂದ ಮರಣ ಪ್ರಾಪ್ತಿಯಾಗಬೇಕೆಂಬ ಪ್ರಸ್ತಾಪ ಮನ್ನಿಸಿ ಅವರ ಅಪೇಕ್ಷೆಯಂತೆ ಬ್ರಹ್ಮವರ ನೀಡುತ್ತಾನೆ. ತದನಂತರ ಅಟ್ಟಹಾಸದಿಂದ ಶುಂಭ-ನಿಶುಂಭರು ಮೆರೆಯುತ್ತಾರೆ. ಅವರನ್ನು ನಿಯಂತ್ರಿಸಿ ಸಂಹರಿಸುವ ಹೊಣೆ ಜಗನ್ಮಾತೆಯದ್ದಾಗುತ್ತದೆ. ಆ ಹೊಣೆ ನಿಭಾಯಿಸುವ ಜಗನ್ಮಾತೆಯು ಹಿಂಸೆಗೆ ಒಳಗಾಗಿದ್ದ ಧರ್ಮವನ್ನು ಕಾಪಾಡುವ ಬಗೆ ಆಪ್ತವಾಗಿ ಈ ನೃತ್ಯರೂಪಕದ ಮೂಲಕ ಅನಾವರಣಗೊಂಡಿತು.


ಕಲೆಯ ಸನಾತನ ಪರಂಪರೆಯಾದ ಶಿವಗೀತೆಯ ಮೂಲಕ ನೃತ್ಯ ರೂಪಕವನ್ನು ಆರಂಭಿಸಿದರು. ಪರಮೇಶ್ವರನ ವಿಶ್ವರೂಪದರ್ಶನ ಬಿಂಬಗಳು ಆಕರ್ಷಣೀಯವಾಗಿದ್ದವು. ತಮ್ಮ ಶಿವಗೀತೆ ಆಧಾರಿತ ನೃತ್ಯಶೈಲಿಯ ಮೂಲಕ ಭರತನಾಟ್ಯ ಕಲಾವಿದ ಸಂತೋಷ್ ಮನಸೆಳೆದರು.
ಕಾರ್ಯಕ್ರಮದಲ್ಲಿ ಎಂ. ಶಾಂತಲಾ, ಸುನಿಲ್, ಪೃಥ್ವಿಕ್, ರಚನ, ನಾಗಶ್ರೀ, ಸ್ನೇಹ, ಭರತ್, ಸೀತಾರಾಮನ್ ಅವರ ನೃತ್ಯ ವೈಖರಿ ಭಿನ್ನವಾಗಿತ್ತು. ತಂಡದ ಸದಸ್ಯರನ್ನು ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಸನ್ಮಾನಿಸಿ, ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.