ಧರ್ಮಸ್ಥಳದ ಲಕ್ಷದೀಪೋತ್ಸವ: ರಂಜಿಸಿದ ಶಿವಪಾರ್ವತಿ ಪುರಾಣ ಕಥಾನೃತ್ಯ

Advt_NewsUnder_1
Advt_NewsUnder_1
Advt_NewsUnder_1

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ಆಯೋಜಿತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಶಿವಪಾರ್ವತಿ ಪುರಾಣ ಕಥನಕ್ಕೆ ಸಂಬಂಧಿಸಿದ ವಿವಿಧ ಪ್ರಸಂಗಗಳ ಆಧಾರಿತ ನೃತ್ಯ ಹಲವರನ್ನು ರಂಜಿಸಿತು.
ಶಿವ ಹಾಗೂ ಪಾರ್ವತಿಯ ದಾಂಪತ್ಯ ಜೀವನವನ್ನು ಕಾಣಿಸಿದರು ಶಿವ ಹಾಗೂ ಗಂಗೆಯ ಅನ್ಯೋನ್ಯತೆಯನ್ನು ಸಾರಿದರು.


ಕೊಲ್ಲೂರು ಮೂಕಾಂಬಿಕೆ, ಮೈಸೂರು ಚಾಮುಂಡೇಶ್ವರಿ, ಶೃಂಗೇರಿ ಶಾರದೆ, ಹೊರನಾಡು ಅನ್ನಪೂರ್ಣಶ್ವರಿ ಸೇರಿದಂತೆ ಪಾರ್ವತಿಯ ಒಂಬತ್ತು ಅವತಾರಗಳನ್ನು ತೋರುವ ಮೂಲಕ ರಾಕ್ಷಸನ ಸಂಹಾರವನ್ನು ಕಣ್ಣಿಗೆ ನಾಟುವಂತೆ ಕಟ್ಟಿಕೊಟ್ಟರು.  ವಿವಿಧ ಭಾಷೆ, ಜನಾಂಗ, ವೇಷಭೂಷಣಗಳನ್ನು ಹೊಂದಿದ ಭಾರತ ದೇಶವು, ವಿವಿಧತೆಯಲ್ಲಿ ಏಕತೆ ಎನ್ನುವ ಸಂದೇಶವನ್ನು ಕತಕ್, ಭರತನಾಟ್ಯ, ಮೋಹಿನಿ ಆಟಂ ನೃತ್ಯದಲ್ಲಿ ತೋರಿಸಿದರು.

ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳು ಶಿವನ ನಾನಾ ಅವತಾರವನ್ನು, ವೀರಗಾಸೆ ನೃತ್ಯವನ್ನು ಜನರ ಮುಂದೆ ಪ್ರದರ್ಶಿಸಿದರು. ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆಯ ಉಪನ್ಯಾಸಕಿ ಆಶಾ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.