ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಕೆರೆಕಟ್ಟೆ ಉತ್ಸವ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂದರ್ಭದ ಚಿತ್ರಣವಿದು.

ಇನ್ನೂ ಕಣ್ತೆರೆಯದ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಪ್ರತಿಯೊಬ್ಬರು ಉತ್ಸವ ಮುಗಿಯುವವರೆಗೂ ಮೊದಲಿನಷ್ಟೆ ಶೃದ್ಧೆ ಭಕ್ತಿಯಿಂದ ದೇವಾಲಯದ ಮುಂದೆ ಆಸಿನರಾಗಿದ್ದರು. ದೂರದ ಊರುಗಳಿಂದ ಬಂದವರು ಸಂದಿಗೊಂದಿಯಲ್ಲಿ ನಿಂತು ಅಲ್ಲಿಯೇ ಪಲ್ಲಕ್ಕಿಯನ್ನು ನೋಡುತ್ತಾ ಸಂತೋಷ ಪಟ್ಟರು.

ದೇಗುಲದಲ್ಲಿ ಶುರುವಾಗುವ ಮೆರವಣಿಗೆಯು ಒಟ್ಟು 16 ಸುತ್ತುಗಳನ್ನು ಒಳಗೊಂಡಿರುತ್ತದೆ. ಆ ಹದಿನಾರು ಸುತ್ತುಗಳಿಗೂ ಒಂದೊಂದು ಹೆಸರಿಡಲಾಗಿರುತ್ತದೆ. ಉಡಿಕೆ ಸುತ್ತು, ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವವಾದ್ಯ ಸುತ್ತು ಇತ್ಯಾದಿ ಹಲವು ನಾಮಗಳ ಸುತ್ತುಗಳಿದ್ದು ಇಲ್ಲಿ ಉಡಿಕೆ 5 ಸುತ್ತುಗಳನ್ನು ಹೊಂದಿರುತ್ತದೆ. ಈ ಸುತ್ತುಗಳು ಎಲ್ಲಾ ಉತ್ಸವಗಳಿಗೂ ಒಂದೇ ತೆರನಾಗಿರುತ್ತದೆ.


ದೇವರ ಸಾನಿಧ್ಯದಲ್ಲಿ ಉತ್ಸವ ಶುರುವಾಗುವ ಮುನ್ನದೇಗುಲದ ಹೊರಭಾಗವನ್ನು ಮೊದಲು ಶುದ್ಧಿ ಮಾಡಿದ ನಂತರ ದೇವಸ್ಥಾನದ ಒಳಭಾಗದಲ್ಲಿ ಮೆರವಣಿಗೆ ಆರಂಭವಾಗುತ್ತದೆ. ಉತ್ಸವದ ಮೆರವಣಿಗೆ ಶುರುವಾದ ಪ್ರತಿ ಸುತ್ತಿನಲ್ಲೂ ಬಲಿ ಕಲ್ಲಿಗೆ ಶುದ್ಧಿ ಮಾಡಲಾಗುತ್ತದೆ.
ಉಡಿಕೆ 5 ಸುತ್ತುಗಳು ಪೂರ್ಣವಾದ ನಂತರದಲ್ಲಿ ಕ್ಷೇತ್ರಪಾಲನಿಗೆ ಪೂಜೆ ಸಲ್ಲಿಸಿ ಮಂಜುನಾಥ ಸ್ವಾಮಿಯನ್ನು ಸ್ವರ್ಣ ಪಲಕ್ಕಿಯಲ್ಲಿ ಕೂರಿಸಲಾಗುತ್ತದೆ. ಪಲ್ಲಕ್ಕಿಯಲ್ಲಿ ಒಟ್ಟು 11 ಸುತ್ತುಗಳನ್ನು ಸುತ್ತಿದ ನಂತರ, ದೇವಾಲಯದ ಮುಂಭಾಗದಿಂದ ವಿವಿಧ ತೆರನಾದ ವಾದ್ಯಗಳ ಜೊತೆಗೆ ವಿಜೃಂಭಣೆಯ ಮೆರವಣಿಗೆ ನಡೆಯಿತು.


ಮೆರವಣಿಗೆಗೆ ಮತ್ತಷ್ಟು ಮೆರುಗು ತಂದುಕೊಟ್ಟಿದ್ದು ರಾಜಗಾಂಭಿರ್ಯದಿಂದ ಹೆಜ್ಜೆಹಾಕುತ್ತಿದ್ದ ಲತಾ ಮತ್ತು ಲಕ್ಷ್ಮಿ ಎಂಬ ಎರಡು ಆನೆಗಳು ಹಾಗೂ ಅತ್ಯಂತ ನಿಷ್ಠಾವಂತನಂತೆ ಮೆರವಣಿಗೆಯಲ್ಲಿ ಪಾತ್ರವಹಿಸಿದ ಹಸು ಗೀರಿಶ. ಈ ಮೆರವಣಿಗೆಯಲ್ಲಿ ಸ್ವಾಮಿಯ ಪಲ್ಲಕ್ಕಿಯ ಎರಡು ಬದಿಗಳಲ್ಲಿ ಉದ್ದನೆಯ ಬೆಂಕಿಯ ಪಂಜುಗಳನ್ನು ಹಿಡಿದುಕೊಳ್ಳಲಾಗಿತ್ತು.


ದೇವರನ್ನು ವಿಹಾರಕ್ಕೆ ಕರೆದುಕೊಂಡು ಹೋಗುವುದು ಎನ್ನುವ ಸಂಪ್ರದಾಯವಿದ್ದು, ಹಾಗಾಗಿ ಕಟ್ಟೆಯಲ್ಲಿ ದೇವರನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ರಥವನ್ನು ಭಕ್ತರು ದೇವಾಲಯದ ಸುತ್ತ ಒಂದು ಸುತ್ತು ಸುತ್ತಿಸಿ ಪುನಃ ಸಾನಿಧ್ಯಕ್ಕೆ ಕರೆದುಕೊಂಡು ಹೋಗಲಾಗುತ್ತದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.