ಮಾಧ್ಯಮ ಕ್ಷೇತ್ರದ ಸೇವೆಗಾಗಿ ದಿ ನ್ಯೂಸ್ ಪೇಪರ್ ಅಶೋಸಿಯೇಶನ್ ಆಫ್ ಕರ್ನಾಟಕದಿಂದ ಜಿ.ಕೃಷ್ಣ ರಿಗೆ ರಾಜ್ಯೋತ್ಸವ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
ಬೆಳ್ತಂಗಡಿ: ಸರಿಸುಮಾರು 18 ವರ್ಷಗಳಿಂದ ಮಾಧ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಾ ಪ್ರಸ್ತುತ ಧಾರಾವಾಹಿಗಳಲ್ಲಿ ಕಥೆ, ವಿತ್ರಕಥೆ, ಸಂಭಾಷಣೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿಯ ಜಿ.ಕೃಷ್ಣ ಅವರಿಗೆ ದಿ ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ ಇವರ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. 
ಸಂಸ್ಥೆಯ ಸ್ಥಾಪಕಾಧ್ಯಕ್ಷ ಶ್ರಾವಣ್ ಲಕ್ಷ್ಮಣ್ ಈಗಾಗಲೇ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. 
ಮಾಧ್ಯಮ ಕ್ಷೇತ್ರದಲ್ಲಿ ಮಂಗಳೂರು ಮತ್ತು ಬೆಂಗಳೂರಲ್ಲಿ ರಾಜಕೀಯ, ಹೈಕೋರ್ಟ್, ಅಪರಾಧ ಮತ್ತು ಸಿನಿಮಾ ವಿಭಾಗಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿ, ಪದೋನ್ನತಿಹೊಂದಿ ಹಿರಿಯ ವರದಿಗಾರರಾಗಿಯೂ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 
ಬಳಿಕ ಸಿಮಿಮಾ ಕ್ಷೇತ್ರಕ್ಕೆ ಕಾಲಿಟ್ಟ ಅವರು ಪ್ರಸ್ತುತ ಧಾರವಾಹಿಗಳಲ್ಲಿ ಕಥೆ – ಚಿತ್ರಕಥೆ – ಸಂಭಾಷಣಾಕಾರನಾಗಿ ಕೆಲಸ ಮಾಡುತ್ತಿದ್ದಾರೆ.
ಇದರ ಜೊತೆಯಲ್ಲಿ ಸುಮಾರು 80 ಕ್ಕೂ ಹೆಚ್ಚು ಸಾಕ್ಷ್ಯ ಚಿತ್ರ ನಿರ್ದೇಶನ, 100 ಕ್ಕೂ ಹೆಚ್ಚು ಜಾಹೀರಾತಿಗೆ ಚಿತ್ರ ನಿರ್ದೇಶನ ಮಾಡಿದ್ದು, ‘ಬಣ್ಣದ ಕೊಡೆ’ ಎನ್ನುವ ಕಲಾತ್ಮಕ ಮಕ್ಕಳ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ‘ಅತ್ಯುತ್ತಮ ಬಾಲನಟಿ ರಾಜ್ಯ ಪ್ರಶಸ್ತಿ’ ಕೂಡ ಲಭಿಸಿತ್ತು.
ಇದೀಗ ಮಂಗಳೂರು ಮೂಲದ ನೈಜ ಘಟನೆ ಆದರಿಸಿ “ರಿಪ್ಪರ್” ಅನ್ನುವ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ.
ನನ್ನ ಮತ್ತು ಮಾಧ್ಯಮ ಕ್ಷೇತ್ರದ ನಂಟು ವೃತ್ತಿಪರವೂ, ಭಾವನಾತ್ಮಕ ನಂಟಿನದ್ದೂ ಆಗಿದೆ.
ನ. 27 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಗಣ್ಯರ ಸಮ್ಮುಖ ಈ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.