ಧರ್ಮದರ್ಶಿ ಜನಾರ್ಧನ ಆಚಾರ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ

ಉಜಿರೆ: ಕಾಶಿಬೆಟ್ಟು ಭಗವಾನ್ ಶ್ರೀ ಶನೈಶ್ವರ ದೇವಸ್ಥಾನದ ಧರ್ಮದರ್ಶಿ ಜನಾರ್ಧನ ಆಚಾರ್ಯರಿಗೆ ಭಾರತದ ನ್ಯಾಷನಲ್ ವೃಚ್ವಲ್ ಯುನಿವರ್‌ಸಿಟಿ ಕೊಡ ಮಾಡುವ ವಾಸ್ತು ಮತ್ತು ಜಾತಕ ತಜ್ಞಕ್ಕೆ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪುರಸ್ಕಾರ ನ.23 ರಂದು ನಡೆಯಿತು.
ಶ್ರೀಮತಿ ಸುಂದರಿ ಅಮ್ಮ ಮತ್ತು ಈಶರಪ್ಪ ದಂಪತಿಗೆ 1955ರಲ್ಲಿ ಹುಟ್ಟಿದ ಜನಾರ್ದನ ಆಚಾರ್ಯ 5 ನೇ ತರಗತಿ ವಿದ್ಯಾಬ್ಯಾಸ ಮಾಡಿ 1999ರವರೆಗೆ ಕಾರ್ಪೆಂಟರ್ ವೃತ್ತಿಯನ್ನು ಮಾಡುತ್ತಿದ್ದರು.
2000ರ ಇಸವಿಯಲ್ಲಿ ಶ್ರೀ ಶನೈಶ್ವರ ದೇವಸ್ಥಾನ ಸ್ಥಾಪಿಸಿ, ಧರ್ಮದರ್ಶಿಯಾಗಿ ಕಾರ್ಯ ನಿರ್ವಹಿಸಿ ಜೊತೆಗೆ ಸಾಮಾನ್ಯ ವಾಸ್ತು, ಜಾತಕ ತಜ್ಞರಾಗಿ ಕಾರ್ಯನಿರ್ವಹಿಸಿ 2006ರಲ್ಲಿ ಜಾತಕ ವಾಸ್ತುವಾಗಿ ಧಾರ್ಮಿಕ ಸೇವಾ ರತ್ನ ರಾಜ್ಯ ಪ್ರಶಸ್ತಿ ಪುರಸ್ಕಾರಗೊಂಡಿದ್ದರು.
ಇವರು 1985ರಲ್ಲಿ ಮೋಹಿನಿ ಅಮ್ಮರೊಂದಿಗೆ ವಿವಾಹವಾಗಿ ಮಕ್ಕಳಾದ ಗಾಯತ್ರಿ, ಯೋಗಿತಾ, ಯೋಗೀಶ, ಯಶವಂತ ನಾಲ್ಕು ಮಕ್ಕಳೊಂದಿಗೆ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.