ರಕ್ತೇಶ್ವರಿ ಪದವು ಮಹಿಳಾ-ಪುರುಷ ಕ್ರೀಡಾ-ಕೂಟ ಕಟ್ಟಡ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಪು:ಇಲ್ಲಿಯ ರಕ್ತೇಶ್ವರಿ ಪದವು ನೇತಾಜಿ ಕ್ರೀಡಾ ಕೂಟ ಹಾಗೂ ಮಹಿಳೆಯರ ಹಾಗೂ ಪುರುಷರ ಆಟೋಟ ಸ್ಪರ್ಧೆ ನ.17 ರಂದು ರಕ್ತೇಶ್ವರಿ ಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗಿತು.ಸಂಘದ ನೂತನ ಕಟ್ಟಡ ಉದ್ಘಾಟನೆಯನ್ನು ನೇ.ಕ್ರೀ.ಸಂ. ಗೌರವ ಅಧ್ಯಕ್ಷ ದಿನೇಶ್ ಗೌಡ ಕಲಾಯಿತೋಟ್ಟು ‌ನೆರವೇರಿಸಿದರು. ಪೂರ್ವಾಹ್ನ ಕ್ರೀಡಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಕ್ರೀಡಾ ಕೂಟಕ್ಕೆ, ಕಳಿಯ ಪಂಚಾಯತ ಅಧ್ಯಕ್ಷ ಶರತ್ ಕುಮಾರ್ ಚಾಲನೆ ನೀಡಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳು ಸಂಘದ ಅಧ್ಯಕ್ಷ,ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳೆಯರಿಗೆ, ಮಕ್ಕಳಿಗೆ ಪುರುಷರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆ ನಡೆಯಿತು.ವಿವಿಧ ತರಗತಿಯ ಅತೀ ಹೆಚ್ಚು ಅಂಕ ಪಡೆದ ಸ್ಥಳೀಯ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಪಂಚಾಯತ ಸದಸ್ಯ ಪ್ರವೀಣ್ ಕುಮಾರ್ ಕೊಯ್ಯೂರು ವಹಿಸಿದ್ದರು.ಕಳಿಯ ಪಂಚಾಯತ ಸದಸ್ಯರಾದ ಸುಧಾಕರ ಮಜಲು, ಮೋಹಿನಿ ಹಾಕೋಟೆ,ವಿ ಕ ಪತ್ರಿಕೆ ವರದಿಗಾರ ಭುವನೇಶ್ವರ ಗೇರುಕಟ್ಟೆ, ಸಂಘದ ಗೌರವ ಅಧ್ಯಕ್ಷ ದಿನೇಶ್ ಗೌಡ ಕಲಾಯಿತೋಟ್ಟು,ಕ್ರೀಡಾ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ ಹಾಕೋಟೆ,ರಕ್ತೇಶ್ವರಿ ಪದವು ಭಜನಾ ಮಂಡಳಿ ಅಧ್ಯಕ್ಷ ಕುಶಾಲಪ್ಪ ಗೌಡ ಕಲಾಯಿತೋಟ್ಟು, ಬೊಳ್ಳುಕಲ್ಲು ಭಜನಾ ಕಾರ್ಯದರ್ಶಿ ದಿನೇಶ್ ಗೌಡ ಕಲ್ಕುರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಎಸ್.ಎಸ್.ಎಲ್.ಸಿ ಹೆಚ್ಚು ಅಂಕ ಮತ್ತು ರಾಜ್ಯ ಮಟ್ಟದ ಡ್ಯಾನ್ಸ್‌ ಪಟು ಕು.ದೀಕ್ಷಾ ಡಿ.ಎಮ್.ಕಲಾಯಿತೋಟ್ಟು ಮತ್ತು ಉತ್ತಮ ಪ್ರಶಸ್ತಿ ಪಡೆದ ಸ.ಕಿ.ಪ್ರಾ.ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ ಗೌಡ ಕಲಾಯಿತೋಟ್ಟು ,ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ನಾಳ ಭಜನಾ ಮಂಡಳಿ ಗೌರವ ಅಧ್ಯಕ್ಷ ಶಶಿಧರ ಶೆಟ್ಟಿ ಹೀರ್ಯ, ಜಗದೀಶ್ ಕೆಳಗಿನಬೆಟ್ಟು, ಅಂಗನವಾಡಿ ಕಾರ್ಯಕರ್ತೆ ನಾಗವೇಣಿ,ಆಶಾ ಕಾರ್ಯಕರ್ತೆ ಶಶಿಕಲಾ ಹಾಕೋಟೆ,ಕ್ರೀಡಾ. ಸಂಘದ ಉಪಾಧ್ಯಕ್ಷೆ ಗೀತಾ ಸಂಜೀವ ಗೌಡ, ಜೊತೆ ಕಾರ್ಯದರ್ಶಿ ಅನಂದ ಗೌಡ ಜಾಲ್ನಾಡೆ,ಕೋಶಾಧಿಕಾರಿ ವಿವೇಕ್ ಬಂಗೇರ ವಂಜಾರೆ ಹಾಗೂ ಕ್ರೀಡಾಭೀಮಾನಿಗಳು ಆಟೋಟ ಸ್ಪರ್ಧೆ ಯಶಸ್ವಿಗೆ ಸಹಕರಿಸಿದರು.ಕಾರ್ಯದರ್ಶಿ ರೂಪ ನಾಗರಾಜ್ ವರದಿ ವಾಚಿಸಿದರು. ಸತೀಶ್ ಕೆ.ಎನ್. ಗೇರುಕಟ್ಟೆ. ತೀರ್ಪುಗಾರರಾಗಿದ್ದರು.ಜನಾರ್ದನ ಗೌಡ ಕುಳಾಯಿ, ಸ್ವಾಗತಿಸಿ, ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿ,ಅಜೇಯ ವಂಜಾರೆ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.