ಪುತ್ತೂರು ಎ.ಸಿ ಯಾಗಿ ಡಾ| ಯತೀಶ್ ಉಳ್ಳಾಲ್

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಚೇರಿ ಒಳಗೊಂಡಿರುವ ಪುತ್ತೂರು ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರಾಗಿ (ಎ.ಸಿ) ಕೆಎಎಸ್ ಅಧಿಕಾರಿ ಡಾ| ಯತೀಶ್ ಉಳ್ಳಾಲ್ ನೇಮಕಗೊಂಡಿದ್ದಾರೆ. ತುಮಕೂರು-ರಾಯದುರ್ಗಾ-ದಾವಣಗೆರೆ ಬ್ರಾಡ್‌ಗೇಜ್ ರೈಲ್ವೇ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದವರು ಇಲ್ಲಿಗೆ ವರ್ಗವಾಗಿ ಬಂದಿದ್ದಾರೆ.
ಇದುವರೆಗೆ ಪುತ್ತೂರು ಎ.ಸಿ ಯಾಗಿದ್ದ ಹೆಚ್.ಕೆ ಕೃಷ್ಣಮೂರ್ತಿ ಅವರು ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ವಿಧಾನ ಸಭಾ ಚುನಾವಣಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.
ನೂತನ ಎ.ಸಿ ಆಗಿರುವ ಯತೀಶ್ ಉಳ್ಳಾಲ್ ಅವರು ಮಂಗಳೂರು ತಾಲೂಕು ಉಳ್ಳಾಲದವರು, ತಂದೆ ಮಾರಾಟ ತೆರಿಗೆ ಇನ್ಸ್‌ಪೆಕ್ಟರ್ ಮತ್ತು ತಾಯಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಎನ್‌ಐಟಿಕೆಯಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಯತೀಶ್ ಉಳ್ಳಾಲ್ ಅವರು ಬಳಿಕ ಡಾಕ್ಟರೇಟ್ ಪೂರೈಸಿದ್ದಾರೆ. ಮೂಡಬಿದ್ರೆ ಮೈಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮೆಸ್ಟ್ರಿ ವಿಭಾಗದ ಸಹಾಯಕ ಪ್ರೋಫೆಸರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 2013 ರಲ್ಲಿ ಚುನಾವಣೆ ಸಂದರ್ಭ ಬೂತ್ ಮಟ್ಟದ ಕಾಸ್ಟಿಂಗ್ ತಂಡದಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿದ್ದ ವೇಳೆ ಆಗಿನ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಮತ್ತು ಎಸಿ ಆಗಿದ್ದ ಶ್ರೀಕಾಂತ್ ರಾವ್ ಅವರ ಧಿಟ್ಟ ನಿರ್ಧಾರಗಳು ಮತ್ತು ಚಲನಶೀಲತೆ ಕಾರ್ಯವೈಖರಿಯಿಂದ ಪ್ರಭಾವಿತರಾಗಿ ಸರಕಾರಿ ಸೇವೆಯ ಕನಸುಕಂಡಿದ್ದರು. ಬಳಿಕ ಸಿಕ್ಕ ಅವಕಾಶದಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದು 8 ನೇ ರ್‍ಯಾಂಕ್‌ನೊಂದಿಗೆ ಉತ್ತೀರ್ಣರಾಗಿ ಸಾಧನೆ ಮೆರೆದಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.