ಸಂವಿಧಾನ ವಿರೋಧಿ ಸರಕಾರದ ನಿಲುವಿಗೆ ಡಿಎಸ್‌ಎಸ್ ಬೆಳ್ತಂಗಡಿ ಖಂಡನೆ; ಸಚಿವರ ರಾಜೀನಾಮೆಗೂ ಆಗ್ರಹ

ಬೆಳ್ತಂಗಡಿ: ಬಿಎಸ್ ಯಡಿಯೂರಪ್ಪ ನೇತೃತ್ವ ರಾಜ್ಯದ ಬಿಜೆಪಿ ಸರಕಾರ ಸಂವಿಧಾನ ದಿನಾಚರಣೆ ನೆಪದಲ್ಲಿ ಸಂವಿಧಾನ ವಿರೋಧಿ ಪುಸ್ತಕವೊಂದನ್ನು ಮುದ್ರಿಸಿ ಶಾಲಾ ಕಾಲೇಜುಗಳಿಗೆ ಹಂಚುವ ಮೂಲಕ ಬಿಜೆಪಿ ಮತ್ತು ಸಂಘಪರಿವಾರದ ಗುಪ್ತ ಎಜೆಂಡಾವನ್ನು ಜಾರಿ ಮಾಡಲು ಮುಂದಾಗಿದೆ. ಬಿಜೆಪಿ ಸಂವಿಧಾನದ್ರೋಹಿ ನಾಯಕರನನು ಮೆಚ್ಚಿಸಲು ದೇಶದ ಶ್ರೇಷ್ಠ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಏಕಕಾಲದಲ್ಲಿ ಅಮಾನಿಸಿದ್ದು ಇದು ಸಂವಿಧಾನ ಪ್ರೇಮಿಗಳಲ್ಲಿ ಆಘಾತ ಮೂಡಿಸಿದೆ. ಈ ಕೃತ್ಯವನ್ನು ಡಿಎಸ್‌ಎಸ್ ಅಂಬೇಡ್ಕರ್ ವಾದ ಬೆಳ್ತಂಗಡಿ ಶಾಖೆ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರ. ಸಂಚಾಲಕ ನೇಮಿರಾಜ್ ಕಿಲ್ಲೂರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪತಂಜಲಿ ಉತ್ಪನ್ನಗಳ ಬಹಿಷ್ಕಾರ
ಪತಂಜಲಿಯೋಗ ಪೀಠದ ಬಾಬಾ ರಾಮ್‌ದೇವ ಅವರೂ ಅಂಬೇಡ್ಕರ್ ಅವರನ್ನು ಅವಮಾನಿಸಿ ಹೇಳಿಕೆ ನೀಡಿದ್ದಾರೆ. ಈ ಘಟನೆಯನ್ನೂ ಖಂಡಿಸುವ ನಾವು ಬಾಬಾ ರಾಮ್‌ದೇವ್ ನೇತೃತ್ವ ನೀಡಿ ತಯಾರಿಸಿ ಮಾರುಕಟ್ಟೆ ಮಾಡುತ್ತಿರುವ ಎಲ್ಲಾ ಪತಂಜಲಿ ಉತ್ಪನ್ನಗಳನ್ನು ದಲಿತ ಸಮುದಾಯವಾದ ನಾವು ಬಿಹಿಷ್ಕರಿಸುತ್ತೇವೆ ಎಂದೂ ವಿವರ ನೀಡಿದರು. ಸಂವಿಧಾನ ವಿರೋಧ ಹೇಳಿಕೆ ನೀಡಿದ ಶಿಕ್ಷಣ ಇಲಾಖೆ ಅಧಿಕಾರಿಯನ್ನು ವಜಾಮಾಡಬೇಕು ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇದರ ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಗೋಷ್ಠಿಯಲ್ಲಿ ತಾ| ಖಜಾಂಜಿ ಬಿ.ಕೆ ಶೇಖರ್, ಕಾರ್ಯಕಾರಿಣಿ ಸದಸ್ಯ ಸುಂದರ ನಾಲ್ಕೂರು ಮತ್ತು ಸುಂದರ ಎನ್ ನಾವೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.