ನ.30 ಮತ್ತು ಡಿ.1 ಉಜಿರೆಯಲ್ಲಿ ಎಕ್ಸಪೀರಿಯ-2019 ರಾಜ್ಯ ಮಟ್ಟದ ವಿಜ್ಞಾನ ಮೇಳ

ಬೆಳ್ತಂಗಡಿ: ಉಜಿರೆ ಶ್ರೀ.ಧ.ಮಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನ.30 ಮತ್ತು ಡಿ.1 ರಂದು ಎರಡು ದಿನದ ರಾಜ್ಯ ಮಟ್ಟದ ವಿಜ್ಞಾನ ಮೇಳ ಎಕ್ಸಪೀರಿಯ 2019 ನಡೆಯಲಿದೆ ಎಂದುಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಅಶೋಕ್ ಕುಮಾರ್ ತಿಳಿಸಿದರು.
ಅವರು ನ.23 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಈ ವಿಜ್ಞಾನ ಮೇಳದಲ್ಲಿ ಹ್ಯಾಕಥಾನ್, ವಿಜ್ಞಾನ ರಸಪ್ರಶ್ನೆ, ಗಣಿತ ರಸಪ್ರಶ್ನೆ, ವಿಜ್ಞಾನ ಮಾದರಿ ತಯಾರಿ, ಇತ್ಯಾದಿ ಸ್ಪರ್ಧೆಗಳ ಜೊತೆಗೆ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ನಡೆಯಲಿದ್ದು ರಾಜ್ಯದಾದ್ಯಂತ ಸುಮಾರು 75 ಕಾಲೇಜುಗಳಿಂದ ತಲಾ 4ರಿಂದ 5 ರಂತೆ 250 ರಿಂದ 300 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಕಾರ್ಯಕ್ರಮದ ಮುಖ್ಯ ಸಂಚಾಲಕ ಡಾ| ಶಂಶುದ್ದೀನ್, ಡಾ| ರಜಿತಾ, ಸತ್ಯನಾರಾಯಣ ಭಟ್, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.