ಗುರುವಾಯನಕೆರೆ: ಮೇಲಂತಬೆಟ್ಟು ವಿಧವೆಗೆ ಕಟ್ಟಿಸಿದ ನೂತನ ಮನೆಯ ಹಸ್ತಾಂತರ

Advt_NewsUnder_1
Advt_NewsUnder_1

ಬೆಳ್ತಂಗಡಿ :ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಇದರ ನೇತೃತ್ವದಲ್ಲಿ ದಾನಿಗಳ ಮತ್ತು ಹಲವಾರು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗುರುವಾಯನಕೆರೆಯ ಮೇಲಂತಬೆಟ್ಟುವಿನಲ್ಲಿ ವಿಧವೆಗಾಗಿ ನಿರ್ಮಿಸಲ್ಪಟ್ಟ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮವು ಇಂದು (ನ. 23) ನಡೆಯಿತು.

 

ತಾ.‌ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ದುಆ ಆಶೀರ್ವಚನಗೈದರು. ಮುದರ್ರಿಸ್ ಆದಂ ಅಹ್ಸನಿ, ಗುರುವಾಯನಕೆರೆ ಮಸ್ಜಿದ್ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್, ಬಳಿಕ‌ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆ, ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೊ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಇಕ್ಬಾಲ್ ಬಂಗೇರ್ ಕಟ್ಟೆ, ಗುರುವಾಯನಕೆರೆ ಜುಮ್ಮಾ ಮಸ್ಜಿದ್ ಕಜಾಂಜಿ ಹಾಜಿ ಉಮರ್, ಯುವ ಉದ್ಯಮಿ ಉಸ್ಮಾನ್ ಗುರುವಾಯನಕೆರೆ, ಗುರುವಾಯನಕೆರೆ ದರ್ಗಾ ಸಮಿತಿ ಜೊತೆ ಕಾರ್ಯದರ್ಶಿ ಅಬ್ದುಲ್ಲತೀಫ್ ಹಾಜಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಲ|ಅಶ್ರಫ್ ಆಲಿಕುಂಞಿ ಮುಂಡಾಜೆ, ಸುನ್ನತ್ ಕೆರೆ ಮಸ್ಜಿದ್ ಅಧ್ಯಕ್ಷ ಅಶ್ರಫ್ ಮೊದಲಾದವರು ಭಾಗಿಯಾಗಿದ್ದರು.

ಮೇಲಂತಬೆಟ್ಟುವಿನ ವಿಧವೆಮಹಿಳೆಗೆ ಮನೆಯ ಬೇಡಿಕೆ ಬಂದಾಗ ಮನೆ ನಿರ್ಮಿಸಿಕೊಡುವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿರ್ಧರಿಸಿ ದಾನಿಗಳ ಸಹಾಯ ಸಹಕಾರ ಬಯಸಿತ್ತು. ತಾಜುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಕೊಂಟುಪಲ್ಕೆ, ಅನ್ಸಾರುಲ್ ಇಸ್ಲಾಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಸುನ್ನತ್ ಕೆರೆ, SSF ಗುರುವಾಯನಕೆರೆ ಯುನಿಟ್, ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು, ಹಾಗೂ ಉದಾರದಾನಿಗಳು ಕೈ ಜೋಡಿಸುವ ಮೂಲಕ ಸುಂದರ ಮನೆ ನಿರ್ಮಾಣಕ್ಕೆ ಸಾಕ್ಷಿಯಾಗಿದ್ದಾರೆ.

ಸುಮಾರು ಎಂಟು ಲಕ್ಷ ರೂ. ವೆಚ್ಚ ತಗುಲಬಹುದಾದ ಈ ಮನೆಗೆ ಕೇವಲ ಮೂರು ಲಕ್ಷ ದಷ್ಟು ಮಾತ್ರ ಖರ್ಚು ಮಾಡಲಾಗಿದ್ದು ಉಳಿದ ಎಲ್ಲ ಮೊತ್ತವನ್ನೂ ಕಾರ್ಯಕರ್ತರು ಶ್ರಮಾದಾನದ ಮೂಲಕ ಪೂರೈಸಿ ಮಾದರಿಯಾಗಿದ್ದಾರೆ.
ಇಂದು ಆಯೋಜನೆಗೊಂಡಿದ್ದ ಸಭಾ ಕಾರ್ಯ‍ಕ್ರಮದಲ್ಲಿ ವಾಟ್ಸ್ ಆಪ್ ಗ್ರೂಪ್ ನ ಎಡ್ಮಿನ್ ಗಳಲ್ಲಿ ಓರ್ವರಾದ ಮುಸ್ತಫಾ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನಿಸಾರ್ ಸುನ್ನತ್ ಕೆರೆ ನಿರೂಪಿಸಿದರು. ರಹ್ಮಾನ್ ನಾವೂರು ವಂದನಾರ್ಪ‍ಣೆಗೈದರು. ಸಮಾರಂಭದ ಬಳಿಕ ಮನೆಯ ಹಿರಿಯ ವೃದ್ಧೆಗೆ ಮನೆಯ ಕೀಲಿಕೈ ಹಸ್ತಾಂತರಿಸಲಾಯಿತು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.