ಧರ್ಮಸ್ಥಳ: ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ರಾಜ್ಯಮಟ್ಟದ ವಸ್ತುಪ್ರದರ್ಶನ ಸಾಲಿನಲ್ಲಿ ಈ ಬಾರಿ ಹೊಸದಾಗಿ ತೆರೆಯಲಾಗಿರುವ ಪ್ರಕೃತಿ ಆರ್ಗಾನಿಕ್ ಫಾರ್ಮಾ ಎಣ್ಣೆಯ ಮಳಿಗೆಗೆ ಧರ್ಮಸ್ಥಳದ ಡಿ ಹರ್ಷೇಂದ್ರ ಕುಂಮಾರ್ ಭೇಟಿ ನೀಡಿ ಮಾಹಿತಿ ಪಡೆದರು.
ಪ್ರಕೃತಿಯ ಹಲವು ಬಗೆಯ ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಿಸಲಾಗಿರುವ ಈ ಎಣ್ಣೆಯಿಂದ ಕೂದಲು ಉದುರುವಿಕೆಗೆ ಪೂರ್ಣಪರಿಹಾರವಿದೆ. ಈ ಎಣ್ಣೆ ಬಳಸುವುದರಿಂದ 40 ವರ್ಷಗಳ ಮಿತಿಯೊಳಗಿನ ವ್ಯಕ್ತಿಗಳಿಗೆ ಕೂದಲು ಉದುರುವಿಕೆ, ಕೂದಲು ಬಿಳಿಯಾಗುವುದು ಇದಕ್ಕೆ ತಡೆಯಿದೆ. ಮುಖದಲ್ಲಿ ಸುಂದರವಾಗಿ ಗಡ್ಡವಿರಬೇಕು ಎಂಬವರು ಈ ಸಮಸ್ಯೆಯಿಂದ ದುಃಖದಲ್ಲಿದ್ದರೆ ಈ ಎಣ್ಣೆ ಬಳಕೆಯಿಂದ ಶೇ. 100 ಪರಿಹಾರ ವಿದೆ. ಇದನ್ನು ಬೆಳ್ತಂಗಡಿ ತಾಲೂಕಿನ ಪೆರಾಲ್ದರಕಟ್ಟೆಯ ಯುವ ಉದ್ಯಮಿ, ಪಾರಂಪರಿಕ ಗಿಡಮೂಲಿಕೆಗಳ ಬಗ್ಗೆ ಮತ್ತು ಪ್ರಕೃತಿ ಆಸಕ್ತರಾಗಿರುವ ನವಾಝ್ ಶರೀಫ್ ಅವರು ಆವಿಷ್ಕರಿಸಿದ್ದಾರೆ. ಇದು ವಿಶೇಷ ಪ್ರಯೋಗಾಲಯದಲ್ಲಿ ಉತ್ತಮ ಗುಣಮಟ್ಟದ ಪ್ರಮಾಣಪತ್ರ ಪಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗಡೆಯವರು ಈ ಹೊಸ ಪ್ರಾಡೆಕ್ಟ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಪ್ರೋತ್ಸಾಹಿಸಿದ್ದರು.
ಪ್ರಕೃತಿ ಆರ್ಗಾನಿಕ್ ಹೇರ್ಆಯಿಲ್ ಈಗ ಆನ್ಲೈನ್ ಮಾರುಕಟ್ಟೆಯಾದ ಫ್ಲಿಪ್ಕಾರ್ಟ್ ನಲ್ಲೂ ಬುಕ್ಕಿಂಗ್ ಮಾಡಿ ತರಿಸಿಕೊಳ್ಳುವ ಅವಕಾಶವನ್ನೂ ಹೊಂದಿದೆ. ಐಎಸ್ಒ ಮತ್ತು ಟ್ರೇಡ್ಮಾರ್ಕ್ ಕೂಡ ಹೊಂದಿದ್ದು ಅಧಿಕೃತರಿಂದ ನೊಂದಾವಣೆಗೊಂಡಿದೆ.