ನವೆಂಬರ್ 24: ಶಿವಶಕ್ತಿ ಫ್ರೆಂಡ್ಸ್‌ ಕ್ಲಬ್ ಕುತ್ಲೂರು ವತಿಯಿಂದ ಆಹ್ವಾನಿತ ವಲಯ ತಂಡಗಳ ಮುಕ್ತ ಕಬ್ಬಡ್ಡಿ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1

ಕುತ್ಲೂರು: ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಇದರ ಸಂಯುಕ್ತ ಆಶ್ರಯದಲ್ಲಿ ಹಾಗೂ ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಶಿವಶಕ್ತಿ ಫ್ರೆಂಡ್ಸ್‌ ಕ್ಲಬ್ ನ ಏಳನೇ ವರ್ಷದ ‘ವಾರ್ಷಿಕೋತ್ಸವ’ದ ಪ್ರಯುಕ್ತ “58 ಕೆ.ಜಿ ವಿಭಾಗದ ಅಂತರ್ ಜಿಲ್ಲಾ ಮಟ್ಟದ ಹಾಗೂ ಆಹ್ವಾನಿತ ವಲಯ ತಂಡಗಳ ಮುಕ್ತ ಕಬಡ್ಡಿ ಪಂದ್ಯಾಟ ನ 24, 10.00 ಗಂಟೆಯಿಂದ ಕುತ್ಲೂರು ಮೈದಾನದಲ್ಲಿ ನಡೆಯಲಿದೆ.ಕಬ್ಬಡ್ಡಿ ಪಂದ್ಯಾಟವನ್ನು ಅತ್ರಿಜಾಲು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ರಮೇಶ್ ಕೆ.ಭಟ್ ಉಧ್ಘಾಟಿಸಲಿದ್ದಾರೆ.ಊರಿಗ ಪ್ರಮುಖರು ಸೇರಿದಂತೆ ಗಣ್ಯಾತೀಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ.6.30 ಕ್ಕೆ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಸತೀಶ್ ಪಡಿವಾಳ್ ವಹಿಸಲಿದ್ದು.ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ , ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಸುಂದರ ಹೆಗ್ಡೆ, ಲ.ಮುರಳಿ ಬಿ ನೊಟರಿ ವಕೀಲರು,ಬೆಳ್ತಂಗಡಿ ಮಂಡಲ ಬಿ.ಜೆ ಪಿ ಅಧ್ಯಕ್ಷ ಜಯಂತ್ ಕೋಟ್ಯಾನ್,ನಿತ್ಯಾನಂದ ನಾವರ ,ಜೀವಂಧರ್ ಕುಮಾರ್ ಬಳಕ್ಕ ಮುಂತಾದ ಗೌರವಾನ್ವಿತ ಗಣ್ಯಾತೀಗಣ್ಯರು ಭಾಗವಹಿಸಲಿದ್ದಾರೆ.ಹೆಚ್ಚಿನ ತಂಡಗಳು ಭಾಗವಹಿಸಲಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸಂಘಟನೆಯು ಪ್ರಕಟನೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.