ಬೆಳ್ತಂಗಡಿ ಸಬ್‌ಇನ್ಸ್‌ಪೆಕ್ಟರ್ ಆಗಿ ದಕ್ಷ ಪೊಲೀಸ್ ಅಧಿಕಾರಿ ನಂದ ಕುಮಾರ್

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಠಾಣಾ ಎಸ್.ಐ ಆಗಿದ್ದ ರವಿ ಬಿ.ಎಸ್ ಅವರಿಗೆ ಪದೋನ್ನತಿ ಹೊಂದಿ ವರ್ಗಾವಣೆಯಾಗಿದ್ದು ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನೂತನ ಎಸ್.ಐ ಆಗಿ ಉಪ್ಪಿನಂಗಡಿ  ಎಸ್‌ಐ ಆಗಿದ್ದ ನಂದ ಕುಮಾರ್ ಅವರು ಆಗಮಿಸಲಿದ್ದಾರೆ.
ಮಾನವೀಯ ಸ್ಪಂದನೆ ಮತ್ತು ಅತ್ಯುತ್ತಮ ಸೇವೆಯ ಮೂಲಕ ಈಗಾಗಲೇ ಗುರುತಿಸಿಕೊಂಡಿರುವ ನಂದ ಕುಮಾರ್ ಅವರು ಉಪ್ಪಿನಂಗಡಿ ಎಸ್‌ಐ ಆಗುವ ಮುನ್ನ ಬಂಟ್ವಾಳದಲ್ಲಿ ಎಸ್‌ಐ ಆಗಿ ಹೆಸರು ಮಾಡಿದ್ದರು.
ಎರಡೂವರೆ ವರ್ಷ ಉಪ್ಪಿನಂಗಡಿ ಎಸ್‌ಐ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಅವರು ವಿಶಿಷ್ಠ ವ್ಯಕ್ತಿತ್ವ, ವೈಶಿಷ್ಟ್ಯಪೂರ್ಣ ಕಾರ್ಯವೈಖರಿ, ಮಾನವೀಯ ಗುಣಕ್ಕೆ ಹೆಸರುವಾಸಿಯಾಗಿದ್ದರು. ಸಾರ್ವಜನಿಕ ಮೆರವಣಿಗೆಯೊಂದರಲ್ಲಿ ಕತ್ತಿ ಬೀಸಿದ್ದ ಯುವಕನೊರ್ವನಿಗೆ ಕೇಸು ಜಡಿದು ಜೈಲಿಗಟ್ಟುವ ಬದಲು ಆತನನ್ನು ಆಸ್ಪತ್ರೆಗೆ ಸೇರಿಸಿ ಮನೋ ಚಿಕಿತ್ಸೆ ಕೊಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಪರಿವರ್ತನೆಗೊಳಿಸಿದ್ದರು. ಹಲವು ಮಕ್ಕಳ ತಾಯಿಯಾಗಿದ್ದರೂ ಪರಿತ್ಯಕ್ತರಾಗಿದ್ದ ಅವರನ್ನು ರಕ್ಷಿಸಿ ಆಶ್ರಯ ನೀಡಿದ್ದರು. ಬಂಟ್ವಾಳ ಶರತ್ ಮಡಿವಾಳ ಕೊಲೆ ಪ್ರಕರಣ, ರಾಷ್ಟ್ರೀಯ ಹೆದ್ದಾರಿ ಪರಿಹಾರ ಪಡೆದ ಮಹಿಳೆಗೆ ಆಗಿದ್ದ ವಂಚನೆ ತಪ್ಪಿಸಲು ಕ್ರಮ, ಕೇರಳದ ಉಣ್ಣಿಕೃಷ್ಣನ್ ಕೊಲೆ ಪ್ರಕರಣದ ಆರೋಪಿಯ ಬಂಧನ, ಶತಮಾನಕಂಡಿದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕಾಯಕಲ್ಪ ಮಾಡಿಸುವಲ್ಲಿ ಸಫಲತೆ ಹೀಗೆ ಎಲ್ಲ ವಿಧಗಳಿಂದಲೂ ಅವರು ಪ್ರಸಿದ್ಧಿ ಪಡೆದಿದ್ದಾರೆ.
ಮುಂದಕ್ಕೆ ಅವರು ಬೆಳ್ತಂಗಡಿ ಠಾಣೆಯ ಎಸ್‌ಐ ಆಗಿ ಅಧಿಕಾರ ವಹಿಸುತ್ತಿದ್ದಾರೆ.
ಹಳೆಪ್ರಕರಣಗಳ ಪತ್ತೆಗೆ ಹೆಸರುವಾಸಿಯಾಗಿದ್ದ ಎಸ್‌ಐ ರವಿ
ಈ ಹಿಂದೆ ಠಾಣೆಯಲ್ಲಿ ಎಸ್‌ಐ ಆಗಿದ್ದ ರವಿ ಬಿ.ಎಸ್ ಅವರು ಪ್ರಾಮಾಣಿಕ ನಿಷ್ಠ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಠಾಣೆಯಲ್ಲಿ ಎಲ್‌ಪಿಸಿ ಹಳೆಯ ಪ್ರಕರಣಗಳ ಆರೋಪಿಗಳನ್ನು ಹುಡುಕಿ ಹುಡುಕಿ ಬಂಧಿಸಿ ಕಡತ ವಿಲೇ ಮಾಡಿದ್ದ ಕೀರ್ತಿ ಅವರಿಗಿತ್ತು. ಯಾವುದೇ ಕಾರಣಕ್ಕೂ ನಿರಪರಾಧಿಗಳ ಮೇಲೆ ಸುಳ್ಳು ಕೇಸು ಆಗದಂತೆ ಸಾಕಷ್ಟು ವಿಚಾರ ವಿಮರ್ಷೆ, ವಿಚಾರಣೆ ನಡೆಸಿದ ಬಳಿಕವೇ ಅವರು ಎಫ್‌ಐಆರ್ ದಾಖಲಿಸುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.