ನಾಳ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ರಂಗ ಪೂಜೆ, ಭಜನೆ ಮತ್ತು ಅನ್ನದಾನ ಸೇವೆ ನ.15 ರಂದು ವಿಜೃಂಭಣೆಯಿಂದ ಜರಗಿತು. ಹಾಗೂ ಪ್ರಸ್ತುತ ವರ್ಷದ ಪ್ರಥಮ ರಂಗ ಪೂಜೆಯಾಗಿರುತ್ತದೆ.
ಈ ಹಿಂದೆ ನಾಳದಲ್ಲಿ ನೆಲೆಸಿದ್ದು ಪ್ರಸ್ತುತ ಬೆಂಗಳೂರಿನ ದೇವಸ್ಥಾನದಲ್ಲಿ ಅರ್ಚಕರಾಗಿರುವ ಶ್ಯಾಮ್ ಭಟ್ ಮತ್ತು ಮಕ್ಕಳ ವತಿಯಿಂದ ವಿಶೇಷ ರಂಗ ಪೂಜೆ ಮತ್ತು ಅನ್ನದಾನ ಸೇವೆ ಸಲ್ಲಿಸಿದರು.
ಬೆಳ್ತಂಗಡಿ ಶಾಸಕರ ಅಪ್ತ ಕಾರ್ಯದರ್ಶಿ ಓಡಿಲ್ನಾಳ ನೂತನ ನವದಂಪತಿಗಳಾದ ಸುನಿತಾ ಮತ್ತು ಮಂಜುನಾಥ ರವರಿಂದ ಭಜನಾ ಸೇವೆ ನಡೆಯಿತು. ರಂಗ ಪೂಜೆ, ಅನ್ನದಾನ ಮತ್ತು ಭಜನಾ ಸೇವಾಕರ್ತರನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು ಶಾಲು ಹೊದಿಸಿ, ಪ್ರಧಾನ ಅರ್ಚಕರಾದ ವೇ|ಮೂ|ರಾಘವೇಂದ್ರ ಅಸ್ರಣ್ಣ ಅವರು ಫಲ-ಪುಷ್ಪ ಪ್ರಸಾದ ನೀಡಿದರು. ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ ಪದಾಧಿಕಾರಿಗಳು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.