HomePage_Banner_
HomePage_Banner_

ಯುವವಾಹಿನಿ ವತಿಯಿಂದ ‘ಮುನ್ನೋಟ-ಮುಂದಿನ ಹೆಜ್ಜೆಯತ್ತ’ ಕಾರ್ಯಕ್ರಮ

ಗುರುವಾಯನಕೆರೆ: ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ, ಮಹಿಳಾ ಸಂಚಾಲನ ಸಮಿತಿ ನೇತೃತ್ವದಲ್ಲಿ ಸ್ತ್ರೀ ಶಕ್ತಿಯನ್ನು ಪ್ರಬಲಪಡಿಸುವ ನಿಟ್ಟಿನಲ್ಲಿ, ವಿಶೇಷವಾಗಿ ಮಹಿಳೆಯರಿಗಾಗಿ ಮುನ್ನೋಟ- ಮುಂದಿನ ಹೆಜ್ಜೆಯತ್ತ ಕಾರ್ಯಕ್ರಮ ನ.17ರಂದು ಗುರುವಾಯನಕೆರೆ ಶಾರದಾ ಮಂಟಪದಲ್ಲಿ ನಡೆಯಿತು.


ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ದೀಕ್ಷಿತಾ ಯೋಗೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಅಂಗನವಾಡಿ ಮೇಲ್ವಿಚಾರಕಿ ನಾಗವೇಣಿಯವರು ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುರಿತು ಮಾಹಿತಿ ನೀಡಿದರು.
ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಂಚಾಲನ ಸಮಿತಿ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ ಉಪಸ್ಥಿತರಿದ್ದರು. ಯುವವಾಹಿನಿ ಘಟಕದ ಸದಸ್ಯರು, ಮಹಿಳಾ ಸಂಚಲನಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಮುನ್ನೋಟ ಸಂಚಾಲಕಿ ಶರ್ಮಿಳಾ ಅಶ್ವಥ್ ಕುಮಾರ್ ಸ್ವಾಗತಿಸಿ, ಮಹಿಳಾ ಸಂಚಲನಾ ಸಮಿತಿ ಕಾರ್ಯದರ್ಶಿ ಸುಧಾಮಣಿ ಆರ್.ವಂದಿಸಿ, ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.