ಗರ್ಡಾಡಿ-ಪಡಂಗಡಿ ಬಿಲ್ಲವ ಸಂಘದಿಂದ 165ನೇ ಗುರು ಜಯಂತಿ ಆಚರಣೆ

ಗರ್ಡಾಡಿ : ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ಘಟಕ ಗರ್ಡಾಡಿ-ಪಡಂಗಡಿ ಇದರ ವತಿಯಿಂದ 165ನೇ ಗುರು ಜಯಂತಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನ.17ರಂದು ಗರ್ಡಾಡಿ-ಪಡಂಗಡಿ ಸಂಘದ ವಠಾರದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ. ಸಂಘದ .ಅಧ್ಯಕ್ಷ ಪದ್ಮನಾಭ ಮಾಣಿಂಜ ನೆರವೇರಿಸಿದರು. ಮಂಗಳೂರು ಕದ್ರೋಳಿ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿದರು.  ಗರ್ಡಾಡಿ-ಪಡಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಧ್ಯಕ್ಷೆ ಸುಜಿತಾ ವಿ. ಬಂಗೇರ, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ನಿಕಟಪೂರ್ವ ಅಧ್ಯಕ್ಷೆ ರಾಜಶ್ರೀ ರಮಣ್, ಬೆಳ್ತಂಗಡಿ ಯೋಜನಾಧಿಕಾರಿ ಯಶವಂತ್ ಎಸ್., ಬಳಂಜ ಬಿಲ್ಲವ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಎಸ್, ಕುಕ್ಕೇಡಿ-ನಿಟ್ಟಡೆ ಶ್ರೀ.ಗು.ನಾ.ಸ್ವಾ.ಸೇ.ಸಂ ಅಧ್ಯಕ್ಷ ಸದಾನಂದ ಪೂಜಾರಿ, ಪಡಂಗಡಿ ತಾ.ಪಂ ಸದಸ್ಯೆ ಸುಶೀಲಾ ಬರಾಯ, ಬೆಳ್ತಂಗಡಿ ಶ್ರೀ.ಗು.ನಾ.ಸ್ವೇ.ಸಂಘದ ಕಾರ್ಯದರ್ಶಿ ನಾರಾಯಣ ಪೂಜಾರಿ ಬೆಳಾಲು, ಬ್ರಹ್ಮಶ್ರೀ ಗು.ಸ್ವಾ.ಸೇ.ಸಂಘ ಪಡಂಗಡಿ-ಗರ್ಡಾಡಿ ಗೌರವಾಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್, ಕಾರ್ಯದರ್ಶಿ ಉಮೇಶ್ ಅಮೀನ್, ಗೋಪಾಲ ಪೂಜಾರಿ, ಜಯರಾಮ ಪೂಜಾರಿ ಪಾಲ್ತ್ಯಾರು, ಸುಜಯ ಎಂ, ವಿದ್ಯಾ ಪಡಂಗಡಿ ಅರುಣ್ ಅತ್ತನಾಡಿ, ವಸಂತ ಬಿ., ಮಂಜಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಡಂಗಡಿ ಗ್ರಾ.ಪಂ ಅ.ಅಧಿಕಾರಿ ಸುಧಾಕರ ಡಿ, ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ ಸಂಘದ ನಿರ್ದೇಶಕ ಶ್ರೀಧರ ಪೂಜಾರಿ ಪರಿಮುಖ ಹಾಗೂ ನಿವೃತ್ತ ಸೈನಿಕ ಲೆಪ್ಟಿನೆಂಟ್ ಪೂವಪ್ಪ ಪೂಜಾರಿಯವರಿಗೆ ಸನ್ಮಾನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.