ಬೆಳ್ತಂಗಡಿ ತಾಲೂಕು ಮೂಲ್ಯರಯಾನೆ ಕುಂಬಾರರ ಸೇವಾ ಸಂಘ ವಿದ್ಯಾರ್ಥಿ ವೇತನ ವಿತರಣೆ- ಸಾಧಕರಿಗೆ ಸನ್ಮಾನ

Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ, ಕುಲಾಲ-ಕುಂಬಾರರ ಯುವ ವೇದಿಕೆ, ಬೆಳ್ತಂಗಡಿ ತಾಲೂಕು ಇದರ ಸಹಯೋಗದಲ್ಲಿ ಸ್ವಜಾತಿ ಪ್ರತಿಭಾವಂತ ಮತ್ತು ಅರ್ಹ ಬಡ ವಿದ್ಯಾರ್ಥಿಗಳಿಗೆ 2019-20ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನ.17ರಂದು ಜರುಗಿತು.


ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ, ನೂತನ ಸಭಾಭವನ ನಿರ್ಮಾಣಕ್ಕೆ ಪೂರ್ಣ ಸಹಕರ ಕೊಡುವುದಾಗಿ ತಿಳಿಸಿದರು. ಅಧ್ಯಕ್ಷತೆಯನ್ನು ಸಂಘದ ತಾಲೂಕು ಅಧ್ಯಕ್ಷ ಹರೀಶ್ ಕಾರಿಂಜ ವಹಿಸಿದ್ದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ| ದುಗ್ಗಪ್ಪ ಕಜೆಕಾರ್ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಹರಿಕೃಷ್ಣ ಕೆ.ಎಸ್ ಕಾಯರ್ತಡ್ಕ, ಅಮೂಲ್ಯ ರಬ್ಬರ್ ಇಂಡಸ್ಟ್ರೀಸ್ ಮಾಲಕ ದಿವಾಕರ ಮೂಲ್ಯ, ಕೋಡಿಬೈಲು ಗ್ರೂಪ್ಸ್ ಪುತ್ತೂರಿನ ಸೀನಿಯರ್ ಟೆಕ್ನಿಕಲ್ ಎಕ್ಸುಕ್ಯೂಟ್ ಕೊರಗಪ್ಪ ಕುಲಾಲ್ ಕಲ್ಲಡ್ಕ, ವಾಣಿಜ್ಯ ತೆರಿಗೆ ಅಧಿಕಾರಿ ಯತೀಶ್ ಸಿರಿಮಜಲು, ಮಂಜುಶ್ರೀ ಎರೆಂಜರ್‍ಸ್ ಮಾಲಕ ಬೋಜರಾಜ ಕುಲಾಲ್, ಭಾಗವಹಿಸಿದ್ದರು.
ಈ ಸಂದರ್ಭ ಶಾಸಕ ಹರಿಶ್ ಪೂಂಜ, ಯತೀಶ್ ಸಿರಿಮಜಲು, ಸಾಧಕ ವಿದ್ಯಾರ್ಥಿಗಳಿಂದ ತೇಜಸ್ವಿನಿ ಕೆ, ಶ್ರಾವ್ಯ ಕುಲಾಲ್, ಜಯಶ್ರೀ, ಮೋಕ್ಷಿತಾ, ಅಕ್ಷತಾ, ಇವರನ್ನು ಗೌರವಿಸಲಾಯಿತು. ಯುವ ವೇದಿಕೆ ಅಧ್ಯಕ್ಷ ಲೋಕೆಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಂತೋಷ್ ಭಾರ್ಗವಿ ಸ್ವಾಗತಿಸಿದರು. ಸಂತೋಷ್ ಸಿದ್ದಕಟ್ಟೆ ನಿರೂಪಿಸಿ, ವಸಂತಿ ಮಚ್ಚಿನ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.