HomePage_Banner_
HomePage_Banner_

ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಧಾತ್ರಿ ಪೂಜೆ, ದೀಪೋತ್ಸವ

ಮುಂಡಾಜೆ: ಇಲ್ಲಿಯ ಭಾರ್ಗವ ನಗರ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ನ.9ರಿಂದ 17ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.


ನ.9ರಂದು ತುಳಸಿ ಪೂಜೆ, ಧಾತ್ರಿ ಪೂಜೆಗಳು ಜರುಗಿತು. ನ.17ರಂದು ಶ್ರೀ ಪರಶುರಾಮ ಶ್ರೀ ಸಿದ್ಧಿವಿನಾಯಕ, ಶ್ರೀ ಅನ್ನಪೂರ್ಣೇಶ್ವರೀ ಸನ್ನಿಧಿಯಲ್ಲಿ ವಿಶೇಷ ಸೇವೆಗಳು ಜರುಗಿತು. ಪೂರ್ವಾಹ್ನ ಕೀರ್ತನಾ ಕಲಾತಂಡ ಮುಂಡಾಜೆ ಇವರಿಂದ ಭಕ್ತಿ ಭಜನೆ, ಯಕ್ಷ ನೃತ್ಯ ವಿನೂತನ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ವೈದಿಕ ಸಂತರ್ಪಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಕೀರ್ತನಾ ಕಲಾತಂಡ ಮುಂಡಾಜೆ ಇದರ ಬಾಲಯಕ್ಷ ಕಲಾವಿದರಿಂದ ತುಳು ಯಕ್ಷಗಾನ ಬಯಲಾಟ ಕದಂಬ ಕೌಶಿಕೆ ಪ್ರದರ್ಶನಗೊಂಡಿತು.


ನಂತರ ಶ್ರೀ ಪರಶುರಾಮ ದೇವರ ಉತ್ಸವ, ಪ್ರಸಾದ ವಿತರಣೆ, ನ.18 ರಂದು ಸಂಪ್ರೋಕ್ಷಣೆ, ಕ್ಷೇತ್ರದ ಪರಿವಾರ ದೈವದೇವರುಗಳಿಗೆ ಪರ್ವಸೇವೆಗಳು ನಡೆಯಿತು.
ದೇವಸ್ಥಾನದ ಆಡಳಿತ ಧರ್ಮದರ್ಶಿ ಅಡೂರು ವೆಂಕಟ್ರಾಯ, ಗೌರವಾಧ್ಯಕ್ಷ ಜಗದೀಶ ಆರ್ ಫಡ್ಕೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯನ್.ಎಸ್ ಗೋಖಲೆ ಮತ್ತು ಸಮಿತಿಯ ಸದಸ್ಯರು, ಅರ್ಚಕ ರವಿ ಕಿರಣ ಮರಾಠೆ, ಪ್ರೇಮಾನಂದ ಫಡ್ಕೆ, ಹಾಗೂ ಧರ್ಮದರ್ಶಿ ಮಂಡಳಿ ಸರ್ವಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.