ಐವಿಲ್ ಸರ್ವಿಸ್ ಪಾಯಿಂಟ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:  ಬೆಳ್ತಂಗಡಿ ಮೂರು ಮಾರ್ಗದ ಬಳಿ ದೀಪಾಗೋಲ್ಡ್ ಹಿಂಬಾಗ ಐವಿಲ್ ಸರ್ವಿಸ್ ಪಾಯಿಂಟ್ ಉದ್ಘಾಟನಾ ಸಮಾರಂಭ ನ.17 ರಂದು ಜರುಗಿತು. ಉದ್ಘಾಟನಾ ಸಮಾರಂಭದಲ್ಲಿ  ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರು ವಂ.ಫಾ| ಬೊನವೆಂಚರ್ ನಜ್ರೆತ್  ಆಶೀರ್ವಚನ ನೀಡಿದರು.


ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ವಂ. ಫಾ| ಜೈಸನ್ ಲೋಬೊ ಪ್ರಾರ್ಥನಾ ವಿಧಿ ನೆರವೇರಿಸಿದರು. ಮಾಲಕರ ಮಾತೃಶ್ರೀ ಮೇರಿ ರೋಡ್ರಿಗಸ್ ಸಂಸ್ಥೆಯನ್ನು ಉದ್ಘಾಟಿಸಿದರು. ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲ್ಯಾನ್ಸಿ ಎ.ಪಿರೇರಾ ಪ್ರಾಸ್ತಾವಿಕವಾಗಿ ಮಾತನಾಡಿ, ಶುಭ ಹಾರೈಸಿದರು. ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ವಿನ್ಸೆಂಟ್ ಟಿ. ಡಿಸೋಜ, ನಿರ್ದೇಶಕರಾದ ಜಾನ್ ಆಲ್ವಿನ್ ಪಿಂಟೊ, ವಿಲ್ಸನ್ ಗೊನ್ಸಾಲ್ವಿಸ್, ಸ್ಟೆಲ್ಲಾ ಫ್ರಾಂಕ್, ಸೆಲಿನ್ ನೊರೋನ್ಹಾ, ಗುರಿಕಾರ ಜೀವನ್ ಪತ್ರಾವೊ, ನ.ಪಂ. ಸದಸ್ಯ ಜನಾರ್ದನ ಕುಲಾಲ್, ನಿವೃತ್ತ ಟ್ಯಾಕ್ಸ್ ಆಫೀಸರ್ ಥಾಮಸ್ ಲೋಬೊ, ಟಿ.ವಿ.ಎಸ್ ಲೋಬೊ ಮೋಟಾರ್‍ಸ್‌ನ ಮಾಲಕ ರೊನಾಲ್ಡ್ ಲೋಬೊ, ಸ್ಟೇನಿ ಗೋವಿಯಸ್, ಬೆಳ್ತಂಗಡಿ ಸೋಜ ಸ್ಟೋರ್‍ಸ್‌ನ ಕಾಲೆಸ್ತ್ ಡಿಸೋಜ, ಬೆಳ್ತಂಗಡಿ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಪೌಲಿನ್ ರೆಗೋ, ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಹಿಲರಿ ಮೆಂಡೊನ್ಸಾ, ಪ್ರೇರಣಾ ಸ್ವಸಹಾಯ ಸಂಘದ ಸದಸ್ಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಗುತ್ತಿಗೆದಾರ ಥಾಮಸ್ ಪಿಂಟೊ, ಅರಿಹಂತ ಇಂಟರ್‌ಲಾಕ್ಸ್‌ನ ಮಾಲಕ, ರೋಶ್ನಿ ಇಂಜಿನಿಯರಿಂಗ್ ವರ್ಕ್ಸ್‌ನ ಮಾಲಕ ರೋಬರ್ಟ್ ಡಿಸೋಜ ಮೊದಲಾದವರನ್ನು ಗೌರವಿಸಲಾಯಿತು. ಮಾಲಕ ಮೆಲ್ವಿನ್ ಜೆ ರೋಡ್ರಿಗಸ್ ಮತ್ತು ಐರಿನ್ ಡಿಸೋಜ ಸರ್ವರ ಸಹಕಾರ ಕೋರಿದರು.


ಮೆಲ್ರೋನ್ ಐವಿಲ್ ರೋಡ್ರಿಗಸ್ ವಂದಿಸಿದರು. ಪ್ರೇರಣಾ ಸೌಹಾರ್ದ ಸಹಕಾರಿಯ ನಿರ್ದೇಶಕ ಜಾನ್ ಅರ್ವಿನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.