HomePage_Banner_
HomePage_Banner_
HomePage_Banner_

ಗುರುವಾಯನಕೆರೆಯಲ್ಲಿ ವೈಭವ್ ಬಿಲ್ಡ್ ಮಾರ್ಟ್ ಉದ್ಘಾಟನೆ

Advt_NewsUnder_1

ಗುರುವಾಯನಕೆರೆ: ಇಲ್ಲಿಯ ಶಕ್ತಿನಗರ ಧನುಶ್ರೀ ಕಾಂಪ್ಲೆಕ್ಸ್‌ನಲ್ಲಿ ಕಟ್ಟಡ ಸಾಮಾಗ್ರಿಗಳ ಮಾರಾಟ ಮಳಿಗೆ ಎಸ್.ಕೆ ವೈಭವ್ ಬಿಲ್ಡ್ ಮಾರ್ಟ್ ನ.17ರಂದು ಉದ್ಘಾಟನೆಗೊಂಡಿತು.


ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.  ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ ಕೋಟ್ಯಾನ್, ಗರ್ಡಾಡಿ ಸೈಂಟ್ ಸೆಬಾಸ್ಟಿನ್ ಚರ್ಚ್‌ನ ಧರ್ಮಗುರು ರೆ.ಫಾ| ಅನಿಲ್ ಸಿಲ್ವಾನೊ ಫೆರ್ನಾಂಡಿಸ್, ಕನ್ನಡಿಕಟ್ಟೆ ಮಸೀದಿ ಧರ್ಮಗುರು ಜನಾಬ್ ಸಂಶುದ್ದೀನ್ ದಾರಿಮಿ, ನಿವೃತ್ತ ಯೋಧ ಮೋಹನ್ ಜಿ.ಮೂಲ್ಯ ಸಿದ್ಧಕಟ್ಟೆ, ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು, ಕುವೆಟ್ಟು ಕ್ಷೇತ್ರದ ಜಿ.ಪಂ.ಸದಸ್ಯೆ ಮಮತಾ ಎಂ ಶೆಟ್ಟಿ, ತಾ.ಪಂ ಸದಸ್ಯ ಗೋಪಿನಾಥ ನಾಯಕ್, ಬೆಳ್ತಂಗಡಿ ತಾಲೂಕು ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಜಯ್ ನಾಗೇಂದ್ರ, ಪಡಂಗಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಉಪಾಧ್ಯಕ್ಷ ಶಂಕರ ಶೆಟ್ಟಿ, ಶಕ್ತಿನಗರ ಸೂರ್ಯ ಕಂಪೌಂಡ್‌ನ ಗೋಪಾಲ ಮೂಲ್ಯ, ಬೆಳ್ತಂಗಡಿ ನ್ಯಾಯವಾದಿ ಎನ್.ಅಜಿತ್ ಕುಮಾರ್ ಬೆಳ್ತಂಗಡಿ ಎಪಿಎಂಸಿ ಸದಸ್ಯ ಅಶೋಕ್ ಗೋವಿಯಸ್, ಪತ್ರಕರ್ತ ಭುವನೇಶ್ ಜಿ, ಕುವೆಟ್ಟು ಗ್ರಾ.ಪಂ. ಸದಸ್ಯರುಗಳಾದ ಪುರಂದರ ಶೆಟ್ಟಿ, ರೋಹಿಣಿ, ದೀಪಾ ಶೆಣೈ, ಮಂಗಳೂರು ಕೋಟೆಕಾರ್‌ನ ಗುತ್ತಿಗೆದಾರ ಮಾಧವ ರಾವ್ ಸಿ.ಹೆಚ್, ಓಡೀಲು ಕಜೆ ದಿನೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ನವಶಕ್ತಿ, ಮಧೂರು ಮೋಹನ್ ರಾವ್, ಮತ್ತಿತರ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.


ಬಾಬು ಶೆಟ್ಟಿ ಪೆರುವಾರು, ಪಾಲುದಾರರಾದ ಸೀತಾರಾಮ ಶೆಟ್ಟಿ ಪೆರುವಾರು, ಸಂತೋಷ್ ಶೆಟ್ಟಿ ಹಲ್ಲಂದೋಡಿ, ವೈಶಾಖ್ ರಾವ್ ಮಂಗಳೂರು ಮತ್ತು ಪಾಲುದಾರರ ಕುಟುಂಬವರ್ಗದವರಾದ ಸುಷ್ಮಾ ಸೀತಾರಾಮ ಶೆಟ್ಟಿ, ಸೀತಾ ಶೆಟ್ಟಿ ಹಲ್ಲಂದೋಡಿ ಮತ್ತು ಬಂಧುಗಳು ಉಪಸ್ಥಿತರಿದ್ದು, ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.
ಕು| ರಕ್ಷಾ ಶೆಣೈ ಪ್ರಾರ್ಥಿಸಿ, ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.