ನ.18: 2ನೇ ಪ್ರಕೃತಿ ಚಿಕಿತ್ಸಾ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶ್ರೀ.ಧರ್ಮಸ್ಥಳ ಮಂಜುನಾಥೇಶ್ಚರ ಯೋಗ  ಮತ್ತು ಪ್ರಕೃತಿ ಚಿಕಿತ್ಸಾ ವಿದ್ಯಾಲಯದಲ್ಲಿ ನ.18 ರಂದು 2ನೇ ಪ್ರಕೃತಿ ಚಿಕಿತ್ಸಾ ದಿನಾಚರಣೆ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ತಿಳಿಸಿದರು. ಅವರು ನ.16 ರಂದು ಉಜಿರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ಕಳೆದ ಹಲವಾರು ವರ್ಷಗಳಿಂದ ದೇಶದಾದ್ಯಂತ ಗಾಂಧಿ ಜಯಂತಿಯಂದು ಪ್ರಕೃತಿ  ಚಿಕಿತ್ಸಾ ಕಾಲೇಜುಗಳು ಆಚರಿಸಿಕೊಂಡು ಬರುತ್ತಿದ್ದವು ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವರೋಗ ದಿನವನ್ನು ಆಚರಿಸಿ ಕಳೆದ 6 ವರ್ಷಗಳಿಂದ ಯೋಗವು ಪ್ರಖ್ಯಾತಿ ಪಡೆದ ಹಿನ್ನಲೆಯಲ್ಲಿ ಕಳೆದ 2 ವರ್ಷಗಳ ಹಿಂದೆ ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಕರೆಯ ಮೆರೆಗೆ ಎಲ್ಲಾ ಭಾರತೀಯ ಚಿಕಿತ್ಸಾ ಪದ್ದತಿಗಳು ಆ ಚಿಕಿತ್ಸಾ ಪದ್ದತಿಯ ಬೆಳವಣಿಗೆಗೆ ಸಹಾಯಕರವಾದ ದಿನವನ್ನು ನಿಗದಿ ಪಡಿಸಿ ದೇಶದಾತ್ಯಂತ ಆ ದಿನವನ್ನು ಆಚರಿಸಿಕೊಂಡು ಬರಬೇಕೆಂದು ಸರಕಾರಿ ಆದೇಶ ನೀಡಲಾಯಿತು. ಅದರಂತೆಯೇ ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಅಯುಷ್ ಮಂತ್ರಾಲಯ ಒಂದು ಸಮಿತಿಯನ್ನು ರಚಿಸಿ ಪ್ರಕೃತಿ ಚಿಕಿತ್ಸಾ ದಿನವನ್ನು ನಿಗದಿಗೊಳಿಸಿದರು.
ಪ್ರಕೃತಿ ಚಿಕಿತ್ಸಾ ದಿನದ ಪ್ರಾಮುಖ್ಯತೆ
ಭಾರತೀಯ ಚಿಕಿತ್ಸಾ ಕ್ಷೇತ್ರದಲ್ಲಿ ಮಹಾತ್ಮಾ ಗಾಂಧೀಜಿಯವರ ಕೊಡುಗೆ ಅಪಾರ. ತಾವು ಸ್ವಂತ ಪ್ರಕೃತಿ ಚಿಕಿತ್ಸಾ ಆಚರಿಸಿಕೊಂಡು ಬಂದಿದ್ದಾರೆ. ಇದರಿಂದ ಅವರು ಪ್ರಕೃತಿ ಚಿಕಿತ್ಸಾ ಕ್ಷೇತ್ರಕ್ಕೆ ಕೊಡಗೆ ನೀಡಿದ ಅತ್ಯಮೂಲ್ಯ ದಿನವನ್ನು ಆಂಯ್ಕೆ ಮಾಡುವುದಾಗಿ ನಿರ್ಣಯಿಸಲಾಯಿತು. ಅದರಂತೆ 1945 ನವೆಂಬರ್ 18ರಂದು ಪ್ರಕೃತಿ ಚಿಕಿತ್ಸಾ ಅಭಿವೃದ್ಧಿಗಾಗಿ ಮಾಡಿದ ಪ್ರಕೃತಿ ಚಿಕಿತ್ಸಾ ಫೆಡರೇಷನ್ ಟ್ರಸ್ಟ್‌ಗೆ ಅಧ್ಯಕ್ಷರಾಗಿ ಸಹಿ ಮಾಡಿದರು. ಇದೇ ದಿನವನ್ನು ಪ್ರಕೃತಿ ಚಿಕಿತ್ಸಾ ದಿನವನ್ನಾಗಿ ನಿಗಧಿಗೊಳಿಸಲಾಯಿತು ಅದರಂತೆ ಕಳೆದ 2 ವರ್ಷಗಳಿಂದ ಇದೇ ದಿನವನ್ನು ದೇಶಾದ್ಯಾಂತ ಈ ದಿನವನ್ನು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಪ್ರಕೃತಿ ಚಿಕಿತ್ಸಾ ಕ್ಷೇತ್ರಕ್ಕೆ ಹೆಗ್ಗಡೆಯವರ ಕೊಡುಗೆ
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆ ಕಳೆದ 35 ವರ್ಷಗಳಿಂದ ಪ್ರಕೃತಿ ಚಿಕಿತ್ಸಾ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವತ್ತು ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಸಂಸ್ಥೆಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ . ಈ ಸಂದರ್ಭದಲ್ಲಿ ಎರಡನೇ ಪ್ರಕೃತಿ ಚಿಕಿತ್ಸಾ ದಿನವನ್ನು ಅತೀ ವಿಜೃಂಭಣೆಯಿಂದ ಆಚರಿಸಲು ಡಾ| ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಿರ್ಧರಿಸಲಾಗಿದೆ ಎಂದು  ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ  ವಿಭಾಗ ಮುಖ್ಯಸ್ಥೆ ಡಾ| ಗೀತಾ ಉಪಸ್ಥಿತರಿದ್ದರು.

 

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.