HomePage_Banner_
HomePage_Banner_

ನೆರೆ ಸಂತ್ರಸ್ತರಿಗೆ ಜೀವ ವಿಮಾ ನಿಗಮ ಅಧಿಕಾರಿಗಳ ಒಕ್ಕೂಟದಿಂದ ಆರ್ಥಿಕ ನೆರವು

ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮದ ಪ್ರಥಮ ದರ್ಜೆ ಅಧಿಕಾರಿಗಳ ಒಕ್ಕೂಟ ಉಡುಪಿ ವಿಭಾಗ ವತಿಯಿಂದ ತಾಲೂಕಿನ ನೆರೆ ಸಂತ್ರಸ್ತ 7 ಕುಟುಂಬಗಳಿಗೆ ಆರ್ಥಿಕ ಧನಸಹಾಯ ಹಸ್ತಾಂತರ ಕಾರ್ಯಕ್ರಮ ನ.15ರಂದು ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ಜರಗಿತು.


ಭಾರತೀಯ ಜೀವ ವಿಮಾ ನಿಗಮ ಪ್ರಥಮ ದರ್ಜೆ ಅಧಿಕಾರಿಗಳ ಒಕ್ಕೂಟ ಉಡುಪಿ ವಿಭಾಗದ ಅಧ್ಯಕ್ಷ ಅಣ್ಣಯ್ಯ ನೀಲಾವರ್, ಕಾರ್ಯದರ್ಶಿ ಬಿ. ಅಶೋಕ, ಜೊತೆ ಕಾರ್ಯದರ್ಶಿ ಎಚ್.ಎಸ್ ಮಂಜುನಾಥ, ಪದಾಧಿಕಾರಿಗಳಾದ ಸಂಜೀವ ಬಿ.ಎನ್, ಕೆ.ಎಸ್ ಪಾಂಡುರಂಗ ಕಾಮತ್, ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ದೇವಪ್ಪ ನಾಯ್ಕ, ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದು, ಸಂತ್ರಸ್ಥ ಕುಟುಂಬಗಳಿಗೆ ಆರ್ಥಿಕ ಧನ ಸಹಾಯ ಹಸ್ತಾಂತರಿಸಿದರು.

ನೆರೆ ಹಾಗೂ ಮಳೆಯಿಂದ ತೊಂದರೆಯಾದ ಕುಟುಂಬದವರಿಂದ ಪುಟ್ಟಣ್ಣ ಗೌಡ ಬಜಿಲ್‌ಮಾರ್ ಚಾರ್ಮಾಡಿ, ಸಂಜೀವ ಗೌಡ ಮಿತ್ತಬಾಗಿಲು, ಸುಶೀಲ ಕುಕ್ಕಾವು, ಪ್ರತಿಮಾ ಐಂಬೂರು ಶಿಬಾಜೆ, ಸದಾನಂದ ತುಂಬಾತಾಜೆ ಶಿಬಾಜೆ, ಹರೀಶ್ ಗೌಡ ಕೊಳಂಬೆ ಚಾರ್ಮಾಡಿ, ವಿಜಯ ಪಟ್ರಮೆ, ಇವರು ಧನಸಹಾಯ ಪಡೆದುಕೊಂಡರು.
ಅಭಿವೃದ್ಧಿ ಅಧಿಕಾರಿ ಉದಯ ಶಂಕರ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.