ಲಕ್ಷ ದೀಪೋತ್ಸವ ಪಾದಯಾತ್ರೆಯ ಪ್ರಯುಕ್ತ ಪೂರ್ವಬಾವಿ ಸಭೆ

ಮಡಂತ್ಯಾರು: ಇಲ್ಲಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರೆ ಸಮಿತಿ ಮಡಂತ್ಯಾರು ಇದರ ವತಿಯಿಂದ 7 ನೇ ವರ್ಷದ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪ್ರಯುಕ್ತ ನಡೆಯುವ ಪಾದಯಾತ್ರೆಯ ಪೂರ್ವ ಭಾವಿ ಸಭೆಯನ್ನು ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಹಾಗೂ ವಲಯ ಪಾದಯಾತ್ರೆ ಸಮಿತಿ ಅಧ್ಯಕ್ಷ ಜಯಂತ್ ಬಿ ಶೆಟ್ಟಿ ಅವರು ವಹಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಕೆ, ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕಾಂತಪ್ಪ ಗೌಡ, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ಪಂಚಕಟ್ಟೆ ಬಸವೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಸಂಜೀವಶೆಟ್ಟಿ ಮೊಗೆರೋಡಿ, ತಾ.ಪಂ ಸದಸ್ಯ ವಸಂತಿ ಲಕ್ಷ್ಮಣ್, ಗ್ರಾ.ಪಂ ಸದಸ್ಯ ಕಿಶೋರ್ ಶೆಟ್ಟಿ, ಪ್ರಮುಖರಾದ ನಾರಾಯಣ್ ಶೆಟ್ಟಿ, ಅಶೋಕ್ ಭಂಡಾರಿ, ಶ್ರೀಕಾಂತ್ ಶೆಟ್ಟಿ ಸೋಣಂದೂರು, ಪದ್ಮನಾಭ ಸಾಲ್ಯಾನ್, ಪದ್ಮನಾಭ ಅಟ್ಲ, ನವೀನ್ ಕೊಡ್ಲಕ್ಕೆ, ಬಾಲಚಂದ್ರ ಹೆಗ್ಡೆ, ಹರೀಶ್ ಶೆಟ್ಟಿ ಪದೆಂಜಿಲ, ವಲಯದ ಒಕ್ಕೂಟ ಅಧ್ಯಕ್ಷರುಗಳು, ಪದಾಧಿಕಾರಿಗಳು ಜನಜಾಗೃತಿ ವೇದಿಕೆ ಸದಸ್ಯರುಗಳು ವಲಯ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ಸಚಿನ್ ಸ್ವಾಗತಿಸಿ, ಸೇವಾಪ್ರತಿನಿಧಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಶಾಲಿನಿ ವಂದಿಸಿದರು. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.