ಬೆಳ್ತಂಗಡಿ: ಜನಪರ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿರುವ ರಾಜಕೇಸರಿ ಇದರ ಮೂಡನಡುಗೋಡು ಗ್ರಾಮ ಶಾಖೆ ಉದ್ಘಾಟನೆ ಪ್ರಯುಕ್ತ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಇವರ ಸಹಭಾಗಿತ್ವದೊಂದಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ಮಾದರಿಯಾಯಿತು.
ರಾಜಕೇಸರಿ ಸಂಸ್ಥಾಪಕ ದೀಪಕ್.ಜಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಾಜಕೇಸರಿ ನೆಲ್ಲಿಗುಡ್ಡೆಯ ಅಧ್ಯಕ್ಷ ಪ್ರದೀಪ್ ಪೂಜಾರಿ ವಹಿಸಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಪುಂಜಾಲಕಟ್ಟೆ ಠಾಣಾಧಿಕಾರಿ ಸೌಮ್ಯ ಕೆ, ಜಿ. ಪಂ. ಸದಸ್ಯ ಎಂ ತುಂಗಪ್ಪ ಬಂಗೇರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋ. ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ, ದಂಡೆ ಶ್ರೀ ಮಹಾಗಣಪತಿ ದೇವಸ್ಥಾನ ಪ್ರ. ಅರ್ಚಕ ಗಣೇಶ್ ಪ್ರಸಾದ್ ಉಡುಪ, ಪಂಜಿಕಲ್ಲು ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಾ ಯೋಗೀಶ್ ಕುಲಾಲ್, ಕಣಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆಯ ತಜ್ಞ ವೈದ್ಯ ಡಾ| ಬದ್ರಿನಾಥ್, ಪಂಜಿಕಲ್ ಗ್ರಾ.ಪಂ ಸದಸ್ಯ ಸಂಜೀವ ಪೂಜಾರಿ, ಶಾಲಾ ಅಧ್ಯಾಪಕ ಶೇಖರ್ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಕಾಶ್ ಫೆರ್ನಾಂಡಿಸ್, ರಾಜಕೇಸರಿ ಜಿಲ್ಲಾ ಸಂಚಾಲಕ ಲೋಕೇಶ್ ಸಬರಬೈಲು, ತಾ| ಅಧ್ಯಕ್ಷ ಲೋಕೇಶ್ ಕುತ್ಲೂರು ಮೊದಲಾದವರು ಭಾಗಿಯಾಗಿದ್ದರು. ಮುನ್ನೂರಕ್ಕೂ ಅಧಿಕ ಜನ ಶಿಬಿರದ ಪ್ರಯೋಜನ ಪಡೆದರು.