ಲಕ್ಷ ದೀಪೋತ್ಸವ ಪ್ರಯುಕ್ತ ಪಾದಯಾತ್ರೆ ಪೂರ್ವ ತಯಾರಿ ಸಭೆ

ಕಲ್ಲೇರಿ: ಇಲ್ಲಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಣಿಯೂರು ಹಾಗೂ ತಣ್ಣೀರುಪಂತ ವಲಯಗಳ ಪಾದಯಾತ್ರೆ ಪೂರ್ವ ತಯಾರಿ ಸಭೆಯು ಕಲ್ಲೇರಿ ಬಾಪೂಜಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷೆ ಶಾರದಾ. ಆರ್ ರೈ ಅವರು ವಹಿಸಿ ಪಾದಯಾತ್ರೆಯಲ್ಲಿ ಎಲ್ಲಾ ಸದಸ್ಯರು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು. ಸಭೆಯಲ್ಲಿ ಪ್ರಾಸ್ತಾವಿಕ ಮಾಹಿತಿಯನ್ನು ಬೆಳ್ತಂಗಡಿ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಪ್ರಭಾಕರ್ ಪೊಸೊಂದೋಡಿ ಮಾತನಾಡುತ್ತಾ, ಪ್ರತಿ ವರ್ಷವೂ ಪಾದಯಾತ್ರೆಯಲ್ಲಿ ಭಕ್ತರ ಸಂಖ್ಯೆ ಜಾಸ್ತಿ ಯಾಗುತ್ತಿದ್ದು, ಶಿಸ್ತು ಬದ್ದವಾಗಿ ಕಾರ್ಯಕ್ರಮವನ್ನು ನಡೆಸುಕೊಡಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ತಣ್ಣೀರುಪಂತ ಹಾಗೂ ಕಣಿಯೂರು ವಲಯಗಳ ಜನಜಾಗೃತಿ ವಲಯಾಧ್ಯಕ್ಷ ರುಕ್ಮಯ್ಯ ಪೂಜಾರಿ ಹಾಗೂ ಮೋನಪ್ಪ ಗೌಡ, ಕಣಿಯೂರು ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ, ಜನಜಾಗೃತಿ ತಾಲೂಕು ಸದಸ್ಯ ರಾಜೀವ. ಆರ್ ರೈ. ವಲಯಗಳ ಒಕ್ಕೂಟದ ಅಧ್ಯಕ್ಷ ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರು, ಭಜನಾಮಂಡಳಿ ಅಧ್ಯಕ್ಷರು, ಗಣ್ಯರು, ತಣ್ಣೀರು ಪಂತ ವಲಯದ ಮೇಲ್ವಿಚಾರಕಿ ವಿದ್ಯಾ, ಕಣಿಯೂರು ವಲಯದ ಮೇಲ್ವಿಚಾರಕ ಮಾಧವ ಎಂ. ವಲಯದ ಸೇವಾಪ್ರತಿನಿಧಿ ಉಪಸ್ಥಿತರಿದ್ದರು.
ಕಣಿಯೂರು ವಲಯದ ಮೇಲ್ವಿಚಾರಕ ಮಾಧವ. ಎಂ ಕಾರ್ಯಕ್ರಮ ನಿರೂಪಿಸಿ, ಸೇವಾಪ್ರತಿನಿಧಿ ಸೀತಾರಾಮ ಆಳ್ವ ಸ್ವಾಗತಿಸಿ. ಸೇವಾಪ್ರತಿನಿಧಿ ಶಿವರಾಮ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.