ಡೈನಾಮಿಕ್ ಕೋಚಿಂಗ್ ಮತ್ತು ಇನ್ವೆಸ್ಟ್‌ಮೆಂಟ್ ಫೋರಂ ಸಂಸ್ಥೆ ಪುನರಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕು ಶಿಕ್ಷಣ ಮತ್ತು ಉದ್ಯಮ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಾ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇದಕ್ಕೆ ಕಿರೀಟ ಪ್ರಾಯವೇನೋ ಎಂಬಂತೆ ತಾಲ್ಲೂಕಿನಲ್ಲೇ ಪ್ರಪ್ರಥಮ ಬಾರಿಗೆ ಡೈನಾಮಿಕ್ ತರಬೇತಿ ಹಾಗೂ ಬಂಡವಾಳ ಹೂಡಿಕೆ ಸಂಸ್ಥೆ ಮತ್ತೆ ಶುಭಾರಂಭಗೊಳ್ಳಲಿದೆ.
2013ರ ನಂತರದ ಸಣ್ಣ ವಿರಾಮದ ಬಳಿಕ ಮತ್ತೆ ಹೊಸ ಆಯಾಮಗಳೊಂದಿಗೆ ಮತ್ತು ವಿಶೇಷತೆಗಳನ್ನೊಳಗೊಂಡು ಡೈನಾಮಿಕ್ ಸಂಸ್ಥೆ ಜನರ ಬಳಿ ಬರಲಿದೆ. ಸಿ.ಎ. ತರಬೇತಿಯನ್ನು ತಾಲೂಕಿನಲ್ಲಿ ಮೊದಲು ಪ್ರಾರಂಭಿಸಿದ ಹೆಗ್ಗಳಿಕೆ ಕೂಡಾ ಈ ಸಂಸ್ಥೆಗೆ ಸಲ್ಲುತ್ತದೆ.
ಡೈನಾಮಿಕ್ ಕೋಚಿಂಗ್ ಸಂಸ್ಥೆಯ ವಿಶೇಷತೆಗಳು ಮತ್ತು ಲಭ್ಯವಿರುವ ಸೇವೆಗಳು:
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ನಾಗಾಲೋಟದಲ್ಲಿ ಧಾವಿಸಬೇಕಾದ ಆವಶ್ಯಕತೆಯಿದೆ. ಆದ್ದರಿಂದ ಡೈನಾಮಿಕ್ ಕೋಚಿಂಗ್ ಸಂಸ್ಥೆ ಎಫ್.ಡಿ.ಎ., ಎಸ್.ಡಿ.ಎ., ಪಿ.ಡಿ.ಒ. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ಅಣಿಗೊಳಿಸುವ ಟ್ಟಿನಲ್ಲಿ ಅವರಿಗೆ ತರಬೇತಿ ಡಲು ಈ ಸಂಸ್ಥೆ ಮುಂದಾಗುತ್ತಿದೆ. ಅದೇ ರೀತಿ ಸಿ.ಎ. ಫೌಂಡೇಶನ್, ಬ್ಯಾಂಕಿಂಗ್ ಹಾಗೂ ವಾಣಿಜ್ಯ ವಿಭಾಗಕ್ಕೆ ಸಂಬಂಧಿಸಿದಂತಹ ಇತರೆ ತರಬೇತಿಯನ್ನೂ ನೀಡಲಾಗುತ್ತಿದೆ.
ಡೈನಾಮಿಕ್ ಇನ್ವೆಸ್ಟ್‌ಮೆಂಟ್ ಫೋರಂನ ಸೇವೆಗಳು: ಪ್ರಸಕ್ತ ಸಾಲಿನಿಂದ ಇನ್ವೆಸ್ಟ್‌ಮೆಂಟ್ ಫೋರಂನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗುತ್ತಿದೆ. ಸಾಮಾನ್ಯ ಜನರಿಗೆ ಅನುಕೂಲವಾಗಲು ಹಾಗೂ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಕಂಪೆಗಳ ಜೀವ ವಿಮೆ, ಆರೋಗ್ಯವಿಮೆ ಹಾಗೂ ಮ್ಯೂಚುಯಲ್ ಫಂಡ್ ಮತ್ತು ಇತರ ಗ್ರಾಹಕರ ಹೂಡಿಕೆಗಳ ಬಗ್ಗೆ ಅರಿವು ಮತ್ತು ಮಾರ್ಗದರ್ಶನ ನೀಡುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ.
ಸಂಸ್ಥೆಯ ನಿರ್ವಾಹಕರಾದ ಅಖಿಲಾ ಶೆಟ್ಟಿ ಹಾಗೂ ಮಾಲಕ ಹರೀಶ್ ಪೂಜಾರಿಯವರು ಈ ಸಂಸ್ಥೆಯ ಮೂಲಕ ಗ್ರಾಹಕಸ್ನೇಹಿ ಸೇವೆ ಹಾಗೂ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಮಿತವಾದ ದರದಲ್ಲಿ ಒದಗಿಸಲಾಗುವುದು ಎಂದು ಹೇಳಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.