ಅಭಾಸಾಪ ದಿಂದ ಚೊಚ್ಚಲ ವಾಗ್ದೇವಿ ಪ್ರಶಸ್ತಿ: ಡಾ. ರೋಹಿಣಾಕ್ಷ ಶಿರ್ಲಾಲುಗೆ ಗೌರವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸಾಹಿತ್ಯ ಕ್ಷೇತ್ರದಲ್ಲಿ ಭಾರತೀಯ ದೃಷ್ಟಿಯನ್ನು ಪುನಃಸ್ಥಾಪಿಸುವ ಉದ್ಧೇಶದೊಂದಿಗೆ ಕಾರ್ಯಾಚರಿಸುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ರಾಷ್ಟ್ರವಾದಿ ಸಾಹಿತ್ಯ ಸಮರ್ಥರನ್ನು ಗೌರವಿಸುವ ಮತ್ತು ಗುರುತಿಸುವ ಇದೇ ಮೊದಲ ಬಾರಿ ಆದಿ ಕವಿ ಪುರಸ್ಕಾರ ಮತ್ತು ವಾಗ್ದೇವಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಪುತ್ತೂರು ವಿವೇಕಾನಂದ ಕಾಲೇಜು ಪ್ರಾಧ್ಯಾಪಕ, ಯುವ ಚಿಂತಕ, ರೋಹಿಣಾಕ್ಷ ಶಿರ್ಲಾಲು ವಾಗ್ದೇವಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತ್ಯ ಪರಿಷದ್ ಅಧ್ಯಕ್ಷ ಪ್ರೊ. ಪ್ರೇಮಶೇಖರ್ ಮತ್ತು ಗೌರವ ಸಲಹೆಗಾರ ಡಾ. ಎಸ್. ಅರ್ ಲೀಲಾ ಅವರು ಈ ಪ್ರಶಸ್ತಿ ಪ್ರಕಟಿಸಿದ್ದಾರೆ. ಇಸ್ರೋದ ಮಾಜಿ ವಿಜ್ಞಾನಿ, ಬೆಂಗಳೂರಿನ ವಾಗ್ದೇವಿ ವಿಲಾಸ ಶಿಕ್ಷಣ ಸಮೂಹದಮ ಅಧ್ಯಕ್ಷ ಕೆ ಹರೀಶ್ ಅವರು ಈ ಪ್ರಶಸ್ತಿಯ ಪ್ರಾಯೋಜಕರಾಗಿದ್ದಾರೆ. ನ. 24 ರಂದು ಬೆಂಗಳೂರಿನ ನೃಪತುಂಗ ರಸ್ತೆಯ ದಿ ಮಿಥಿಕ್ ಸೊಸೈಟಿ ನಡೆಯಲಿದೆ. ಇನ್ಫೋಸಿಸ್ ಮಾಜಿ ನಿದೇಶಕ, ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಮೋಹನಸಾದ್ ಪೈ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.