ಮುಂಡಾಜೆಯಲ್ಲಿ ಈದ್-ಮಿಲಾದ್ ಆಚರಣೆ

ಮುಂಡಾಜೆ :ಮಸ್ಲಕ್‌ತ್ತ ಅಲೀಮಿ ಸ್ಸುನ್ನಿಯ್ಯ ಮುಂಡಾಜೆ, ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಮುಂಡಾಜೆ ಇದರ ವತಿಯಿಂದ ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್, ಎಂಡಿಸಿ, ಇದರ ನೇತ್ರತ್ವದಲ್ಲಿ ಪ್ರವಾದಿ ಜನ್ಮ ದಿನಾಚರಣೆ ಪ್ರಯುಕ್ತ ಮಿಲಾದ್ ಎವೆನ್ಯೂ ಮಾರ್ಚ್, ಹುಬ್ಬುರ್ರಸೂಲ್ ಕಾನ್ಫರೆನ್ಸ್, ಮದರಸ ವಿದ್ಯಾರ್ಥಿಗಳ ಟೇಲೆಂಟ್ ಎಕ್ಸ್ ಪೋ, ಸ್ಥಾಪಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಜಮಲುಲ್ಲೈಲಿ ಇಸ್ಲಾಮಿಕ್ ಕ್ಯಾಂಪಸ್ ನಲ್ಲಿ‌ನಡೆಯಿತು.‌
ಸಯ್ಯಿದ್ ಕಾಜೂರು ತಂಙಳ್ ನೇತ್ರತ್ವ ವಹಿಸಿದ್ದರು. ಬೆಳಗ್ಗಿನ ಜಾವ ನಡೆದ ಮೌಲೀದ್ ಪಾರಾಯಣ ವನ್ನು ಖತೀಬ್ ಇಬ್ರಾಹಿಂ ಸಖಾಫಿ, ಸಿದ್ದೀಕ್ ಸಖಾಫಿ ಹಿಮಮಿ ನಡೆಸಿಕೊಟ್ಟರು. ಮಸ್ಲಕ್‌ ಕಾರ್ಯಾಧ್ಯಕ್ಷ ಹಾಜಬ್ಬ, ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ, ಸದಸ್ಯ ಇಬ್ರಾಹಿಂ ದರ್ಖಾಸು, ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಹಮೀದ್ ನೆಕ್ಕರೆ, ಕಾರ್ಯದರ್ಶಿ ಲೆತೀಫ್, ಕೋಶಾಧಿಕಾರಿ ಮುಹಮ್ಮದ್ ಜೈ ಭಾರತ್, ಎಂಡಿಸಿ ಸ್ಥಾಪಕಾಧ್ಯಕ್ಷ ಸಯ್ಯಿದಲಿ‌ ಹಾಜಿ, ಧ್ವಜಾರೋಹಣ ಗೈದರು.
ಸಮಾರಂಭದಲ್ಲಿ ಮುಜೀಬ್ ಸಾಹೇಬ್ ನಿಡಿಗಲ್, ಬಿ.ಎನ್‌ ಹಮೀದ್, ಎನ್.ಎಮ್‌ ರಫೀಕ್, ಹನೀಫ್‌ ಮುಸ್ಲಿಯಾರ್, ಅಝೀಝ್ ನಿಡಿಗಲ್, ಶರೀಫ್ ಬೆರ್ಕಳ, ರಶೀದ್ ಬಲಿಪಾಯ, ಕೆಮಯು ಇಬ್ರಾಹಿಂ ಕಾಜೂರು, ಜೆ. ಹೆಚ್ ಸಿದ್ದೀಕ್, ಕಮಾಲ್, ರಫೀಕ್‌ ಮದನಿ ಕಕ್ಕಿಂಜೆ, ಉಸ್ಮಾನ್ ಎಂ.ಕೆ, ಕೆರೀಂ‌ ಕೆ.ಎಸ್, ಕೆ.ಎಚ್‌ ಉಮರ್‌ ಕುಕ್ಕಾವು, ಅಬೂಬಕ್ಕರ್‌ ಕುಕ್ಕಾವು, ಕೆ.ಯು ಮುಹಮ್ಮದ್ ಸಖಾಫಿ, ಶಬೀರ್, ಸಿದ್ದೀಕ್ ನೆಕ್ಕರೆ, ಪುತ್ತಾಕ‌ ಕೂಳೂರು, ಅಬೂಬಕ್ಕರ್‌ ಹಾಜಿ ಸಂಸೆ, ಅಬೂಬಕ್ಕರ್ ಕೂಳೂರು, ನಝೀರ್‌ ಪೆರ್ದಾಡಿ, ಮುಹಮ್ಮದ್ ಶರೀಫ್ ನಿಡಿಗಲ್, ಬದ್ರುದ್ದೀನ್ ಸಖಾಫಿ, ಮುಸ್ತಫಾ ಝೈನಿ, ಅಬ್ಬಾಸ್ ಸಿ, ರಮ್ಲ‌ ನೆಕ್ಕರೆ, ಇಸ್ಮಾಯಿಲ್ ದರ್ಖಾಸ್, ಅಯೂಬ್ ಆಲಿಕುಂಞಿ, ಮೊದಲಾದವರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.