ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ಗೆ 36ನೇ ವರ್ಷದ ಸಂಭ್ರಮ ನ.16,17: ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿ, ಸ್ವಸ್ತಿಕ್ ಪ್ರೊ ಕಬಡ್ಡಿ ಉತ್ಸವ

ಪುಂಜಾಲಕಟ್ಟೆ : ಹಲವಾರು ಸಾಧಕರನ್ನು ಗುರುತಿಸಿ, ಸಾವಿರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿ, ನೂರಾರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 36ನೇ ವರ್ಷದ ಪ್ರಯುಕ್ತ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ , ಸ್ವಸ್ತಿಕ್ ಪ್ರೊ ಕಬಡ್ಡಿ ಉತ್ಸವವು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಧ್ಯಕ್ಷ, ಜಿ.ಪಂ ಸದಸ್ಯ ಯಂ.ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಹಾಗೂ ಮುಂಬಯಿ ಉದ್ಯಮಿ ಸುಂದರ್ ರಾಜ್ ಹೆಗ್ಡೆಯರ ಸಾರಥ್ಯದಲ್ಲಿ ದ.ಕ ಉಡುಪಿ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಪುರುಷರ ಮತ್ತು ಮಹಿಳೆಯರ ಮುಕ್ತ ಹಾಗೂ ಅಂತರ್ ರಾಜ್ಯಮಟ್ಟದ ೬೦ ಕೆ.ಜಿ ವಿಭಾಗದ ಹಾಗೂ ದ.ಕ ಜಿಲ್ಲಾ ಮಟ್ಟದ ಪ್ರೌಢ ಶಾಲೆ, ಪಿಯುಸಿ ವಿಭಾಗದ ಬಾಲಕ-ಬಾಲಕಿಯರ ಪ್ರೊ ಕಬಡ್ಡಿ ಪಂದ್ಯಾಟ ನ.16 ಮತ್ತು 17 ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.
ಪ್ರೌಢ, ಪದವಿ ಪೂರ್ವ ಕಾಲೇಜು, ಬಾಲಕ-ಬಾಲಕಿಯರ ವಿಭಾಗ ಮುಕ್ತ ವಿಭಾಗದಲ್ಲಿ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾಟ ಅಂತರಾಜ್ಯ ಮಟ್ಟದ 6೦ ಕೆ.ಜಿ ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದೆ. ಅಂತರ್‌ರಾಜ್ಯ ಮಟ್ಟದ 6೦ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ, ಹರಿಯಾಣ, ಗುಜರಾತ್, ಕೇರಳ ಮೊದಲಾದ ರಾಜ್ಯಗಳ ತಂಡಗಳು ಭಾಗವಹಿಸಲಿದೆ.
ವಿಜೇತರಿಗೆ ಪ್ರಶಸ್ತಿಫಲಕ ಹಾಗೂ ನಗದು
ಮುಕ್ತ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ರೂ. 15000, ದ್ವಿತೀಯ ರೂ.10,000 ತೃತೀಯ ರೂ. 7000 ಚತುರ್ಥ ರೂ. 5000 ನಗದು ಹಾಗೂ ಟ್ರೋಪಿ ಸಿಗಲಿದೆ ಹಾಗೂ ಪ್ರವೇಶ ಶುಲ್ಕ ರೂ500 ನಿಗದಿಸಲಾಗಿದೆ ಹಾಗೂ 60 ಕೆ.ಜಿ ವಿಭಾಗದ ಪಂದ್ಯಾಟದಲ್ಲಿ ಪ್ರವೇಶ ಶುಲ್ಕ ರೂ.1000 ನಿಗದಿಸಿದ್ದು ವಿಜೇತರಿಗೆ ಪ್ರಥಮ ರೂ. 30,000 ದ್ವಿತೀಯ ರೂ.20,000 ತೃತೀಯ ರೂ.10,000, ಚತುರ್ಥ ರೂ.7000ಹಾಗೂ ಟ್ರೋಫಿ ಸಿಗಲಿದೆ. ಹಾಗೂ ಹೈಸ್ಕೂಲ್ ಮತ್ತು ಪಿಯುಸಿ ವಿಭಾಗದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿಯರಿಗೆ ನಗದು ಮತ್ತು ಪ್ರಶಸ್ತಿ ಫಲಕ, ಪ್ರವೇಶ ಶುಲ್ಕವಿರುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರು
ನ.೧6 ಮತ್ತು೧7ರಂದು ನಡೆಯಲಿರುವ ಹೊನಲು ಬೆಳಕಿನ ಸ್ವಸ್ತಿಕ್ ಪ್ರೊ ಕಬಡ್ಡಿ ಉತ್ಸವ ಹಾಗೂ ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಸಂಸದರು, ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಶ್ರೀ ನವದುರ್ಗಾ ಮಂತ್ರಮೂರ್ತಿ ಪುಣ್ಯ ಕ್ಷೇತ್ರ ಪ್ರಧಾನ ತಂತ್ರಿಗಳು, ಜ್ಞಾನಯೋಗ ಪ್ರಶಸ್ತಿ ಪುರಸ್ಕೃತ ಯೋಗೀಶ್ ಕೆ. ಭಟ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಎಡಪಡಿತ್ತಾಯ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು., ಚೆನ್ನೈ ಉದ್ಯಮಿ ನಿತ್ಯಾನಂದ ಹೆಗ್ಡೆ ಮಾಲಾಡಿ, ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ರಂಜನ್ ಗೌಡ, ಪುಂಜಾಲಕಟ್ಟೆ ಆಟೋ-ಚಾಲಕ-ಮಾಲಕ ಸಂಘದ ಗೌರವ ಅಧ್ಯಕ್ಷ ಸುಧಾಕರ ಶೆಣೈ ಖಂಡಿಗ, ಬೆಂಗಳೂರು ಹೈಕೋರ್ಟು ಜಿಲ್ಲಾ ನ್ಯಾಯದೀಶ ದಿನೇಶ್ ಹೆಗ್ಡೆ, ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈ.ಲಿ ಬೆಂಗಳೂರು ಸ್ಥಾಪಕ ಅಶ್ವಥ್ ಹೆಗ್ಡೆ ಬಳಂಜ, ಸೌದಿ ಅರೇಬಿಯ ಉದ್ಯಮಿ ಮಹಮ್ಮದ್ ಶರೀಫ್, ಮುಂಬಯಿ ಉದ್ಯಮಿ ಕಾಪು ಜಯರಾಮ್ ಶೆಟ್ಟಿ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿರುವರು.
ಈ ಎಲ್ಲಾ ಕಾರ್ಯಕ್ರಮಗಳು ನ.16,17ರಂದು ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಭಾಗವಹಿಸಬೇಕಾಗಿ ಪಂದ್ಯಾಟದ ಸಂಚಾಲಕ ರಾಜೇಶ್ ಪಿ. ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ, ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಪಂದ್ಯಾಟದ ಸಹ ಸಂಚಾಲಕ ಅಬ್ದುಲ್ ಹಮೀದ್ ಮಲ್ಪೆ, ತಾಂತ್ರಿಕ ಸಮಿತಿ ಸಂಚಾಲಕ ಪ್ರಾನ್ಸಿಸ್ ವಿ.ವಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.