ಬೆಳಾಲು: ನೈಸರ್ಗಿಕ ಕೃಷಿ ಯೋಜನೆಯಡಿ ಭತ್ತದ ಬೆಳೆ ಕ್ಷೇತ್ರೋತ್ಸವ

ಬೆಳಾಲು: 2019-20ನೇ ಸಾಲಿನ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯಡಿ, ವಲಯ ಕೃಷಿ ಮತ್ತು ತೊಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಮತ್ತು ಕೃಷಿ ಇಲಾಖೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಮುಂಗಾರು -ಹಂಗಾಮಿನಲ್ಲಿ ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವು ನ.7 ರಂದು ಬೆಳಾಲಿನ ಕೊಲ್ಪಾಡಿ ಭಜನಾ ಮಂದಿರದಲ್ಲಿ ಜರುಗಿತು.
ಬೆಳಾಲು ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಬೆಳಾಲು ಗ್ರಾ.ಪಂ.ಸದಸ್ಯೆ ಭವಾನಿ ಮಾರ್ಪಾಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ| ಮುದುರಿಮ ವಿನೋದ, ಡಾ| ಶಿವಣ್ಣ, ಕ್ಲಸ್ಟರ್ ಸದಸ್ಯ ವಿಜಯ ಗೌಡ, ಸಿಆರ್‌ಪಿ ದಿವಾಕರ ಆಚಾರ್ಯ ಬೆಳಾಲು, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಾಯಿನಾಥ್, ಉಮೇಶ್ ಗೌಡ, ರೈತ ಪ್ರತಿನಿಧಿಗಳು, ಪ್ರಗತಿಪರ ಕೃಷಿಕರು ಮತ್ತು ರೈತ ಮಹಿಳೆಯರು ಉಪಸ್ಥಿತರಿದ್ದು, ಭತ್ತದ ಬೆಳೆ ಪ್ರಾತ್ಯಕ್ಷಿಕೆ ನಡೆಸಿದರು.
ಬೆಳಾಲು ಪ್ರಾ.ಕೃ.ಪ.ಸಹಕಾರ ಸಂಘದ ನಿರ್ದೇಶಕ ಸುಲೈಮಾನ್ ಭಾಗವಹಿಸಿ, ಪ್ರಗತಿಪರ ರೈತರು ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿ ಜೀವಾಮೃತ, ಘನ ಜೀವಾಮೃತ ಬಳಕೆ ಮಾಡಿ ಉತ್ತಮ ಇಳುವರಿ ಪಡೆದಿರುತ್ತೇನೆ ಎಂದರು. ಉಮೇಶ್ ಗೌಡ ಬರೆಮೇಲು ಇವರು ಭತ್ತದ ಬೆಳೆ ಪ್ರಾತ್ಯಕ್ಷಿಕೆ ಮಾಡಿದ್ದು ಇವರಿಗೆ ಭತ್ತದ ಬೆಳೆ ಕ್ಷೇತ್ರೋತ್ಸವ ಪ್ರಮಾಣಪತ್ರ ವಿತರಿಸಲಾಯಿತು
ಸಮುದಾಯ ಸಹಾಯಕ ಹೆಚ್.ಬಿ ಮುಳ್ಳೂರು ಸ್ವಾಗತಿಸಿ, ಬ್ರಹ್ಮಾವರದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ| ಬಸಮ್ಮ ಕಾರ್ಯಕ್ರಮ ನಿರೂಪಿಸಿ, ಡಾ| ಸಂತೋಷ ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.