ಹೊಸಂಗಡಿ: ಮಿನಿ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ

ಹೊಸಂಗಡಿ: ಇಲ್ಲಿಯ ಕುರ್ಲೊಟ್ಟು ಕೊಂಜಲಗುರಿ ಎಂಬಲ್ಲಿ ಮಿನಿ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ನ.7 ರಂದು ನಡೆಯಿತು. ನಾರಾವಿ ಕ್ಷೇತ್ರದ ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.


ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾ ವಸಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಒಬಯ್ಯ, ಗ್ರಾ.ಪಂ. ಸದಸ್ಯರಾದ ಹರಿಪ್ರಸಾದ್, ಶ್ರೀಪತಿ ಉಪಾಧ್ಯಾಯ, ರುಕ್ಮಯ್ಯ, ಅಕ್ಬರ್‌ಆಲಿ ಕೆ, ಉಪಾಧ್ಯಕ್ಷೆ ಲಲಿತ ಟಿ ಹೆಗ್ಡೆ, ಮಾಜಿ ಸದಸ್ಯರುಗಳಾದ ಸುಂದರ್ ಕೆ, ಅಬ್ದುಲ್ ರಹಿಮಾನ್, ವಿದ್ಯಾನಂದ್ ಜೈನ್, ಗ್ರಾ.ಪಂ. ಕಾರ್ಯದರ್ಶಿ ಜಯಲಕ್ಷ್ಮೀ, ಗ್ರಾ.ಪಂ.ಸಿಬ್ಬಂದಿಗಳಾದ ಸತೀಶ್ ಪಿ.ವಿ, ಕೃಷ್ಣಪ್ಪ, ಇಂಜಿನಿಯರ್ ನಿತಿನ್ ರೈ, ಊರ ಪ್ರಮುಖರಾದ ಆಲಿಯಬ್ಬ, ಹಮೀದ್ ಬಲ್ಲಂಗೇರಿ, ತಿಮ್ಮಪ್ಪ, ಬಶೀರ್, ದಿನೇಶ್, ಡೀಕಯ್ಯ, ಪ್ರತೀಶ್, ಸತೀಶ್, ಪ್ರಕಾಶ್, ಸುದರ್ಶನ್, ರಮೇಶ್, ಅಶೋಕ, ಭೋಜ ಸುದೆಕಾರ, ಕೃಷ್ಣ ನಾಯಕ್, ಲೋಕೇಶ್, ಪ್ರಶಾಂತ್ ಸುದೆಕಾರು, ಪ್ರದೀಪ್ ಸುದೆಕಾರು, ಪ್ರಶಾಂತ, ಕೇಶವ, ಪಕೀರ, ಕೊಗ್ಗು ನಾಯಕ್, ಇಲ್ಲಿಯವರೆಗೆ ಅಂಗನವಾಡಿ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟ ಅಬ್ದುಲ್ಲಾ, ಅರ್ಚಕ ಸುಬ್ರಹ್ಮಣ್ಯ ಭಟ್, ಕಾಂಟ್ರಾಕ್ಟರ್ ಮಹಮ್ಮದ್, ಆನಂದ್ ಪೊಸಲಾಯಿ, ಆನಂದ್ ಕೋಡಿಂಗೇರಿ, ಸಚ್ಚಣ್ಣ ಹೊಸಂಗಡಿ, ಸಿದ್ದಿಕ್, ಅರುಣ್, ಅಂಗನವಾಡಿ ಕಾರ್ಯಕರ್ತೆ, ಮಕ್ಕಳು, ಪೋಷಕರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿ, ಅಕ್ಬರಾಲಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.