ರೂ. 1.5 ಕೋಟಿ ವೆಚ್ಚದ ಮದ್ದಡ್ಕದ ನೂತನ ಮಸ್ಜಿದ್ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನೂರುಲ್ ಹುದಾ ಜುಮ್ಮಾ ಮಸ್ಜಿದ್ ಇದರ ವತಿಯಿಂದ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಮದ್ದಡ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಮಸ್ಜಿದ್‌ನ ಉದ್ಘಾಟನಾ ಕಾರ್ಯಕ್ರಮವು ಇಂದು (ನ.8)ಜರುಗಿತು.


ಮಸ್ಜಿದ್‌ನ ಖಾಝಿಗಳೂ, ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಭಾರತದ ಪರಮೋಚ್ಛ ಧಾರ್ಮಿಕ ನಾಯಕತ್ವ ಪಡೆದಿರುವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಪದವಿಯ ಸುಲ್ತಾನುಲ್ ಉಲಮಾ ಕಾಂದಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನೂತನ ಮಸ್ಜಿದ್ ಉದ್ಘಾಟನೆ ನೆರವೇರಿಸಿದರು.


ಈ ಸಮಾರಂಭದಲ್ಲಿ ತಾ. ಸಂಯುಕ್ತ ಜಮಾಅತ್ ಸಹಾಯಕ ಚಿಖಾಝಿ ಸಾದಾತ್ ತಂಙಳ್, ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಎಸ್‌ಎಮ್‌ಎ ರಾಜ್ಯಾಧ್ಯಕ್ಷ ಮಲ್‌ಜಅ ತಂಙಳ್ ಉಜಿರೆ,   ಸಂಯುಕ್ತ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ತಂಙಳ್ ಉಜಿರೆ,  ವಾದಿ ಇರ್ಫಾನ್ ತಂಙಳ್ ಸಹಿತ ಪ್ರಮುಖ ಸಯ್ಯಿದರು ಗಳು, ಕಾವಳಕಟ್ಟೆ ಡಾ. ಹಝ್ರತ್ ಸಹಿತ ಹಲವು ಧಾರ್ಮಿಕ ವಿದ್ವಾಂಸರುಗಳು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರ. ಕಾರ್ಯದರ್ಶಿ ಎನ್‌ಕೆಎಮ್ ಶಾಫಿ ಸಅದಿ, ಜಿಲ್ಲಾ ಸಂಚಾಲಕ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್‌ಸಖಾಫಿ ಕಕ್ಕಿಂಜೆ, ಯೆನಪೊಯ ವಿವಿ ಕುಲಪತಿ ಯೆನೆಪೊಯ ಅಬ್ದುಲ್ಲಕುಂಞಿ, ನಗರಾಭಿವೃದ್ಧಿ ಇಲಾಖೆ ಸರಕಾರದ ಕಾರ್ಯದರ್ಶಿ ಕೆ.ಎ ಹಿದಾಯತುಲ್ಲಾ,  ಮದ್ದಡ್ಕ ಖತೀಬ್ ಎಮ್.ಎ ರಫೀಕ್ ಅಹ್ಸನಿ ಸಹಿತ ಪ್ರಮುಖ ಗಣ್ಯರುಗಳು ಉಪಸ್ಥಿತರಿದ್ದರು.


ಜಮಾಅತ್ ಅಧ್ಯಕ್ಷ ಎಸ್.ಎ ಮುಹಮ್ಮದ್ ರಾಝಿಯುದ್ದೀನ್ ಸಬರಬೈಲು, ಸ್ವಾಗತ ಸಮಿತಿ ಚೇರ್‌ಮೆನ್ ತಸ್ಲೀಂ ಆರಿಫ್ ಮದ್ದಡ್ಕ, ಸ್ವಾಗತ ಸಮಿತಿ ವೈಸ್ ಚೇರ್‌ಮೆನ್ ಎ ಅಶ್ರಫ್ ಚಿಲಿಂಬಿ ಮದ್ದಡ್ಕ, ಕನ್ವೀನರ್ ಅಬ್ಬೋನು ಮದ್ದಡ್ಕ, ಸಂಚಾಲಕ ಬದ್ರುದ್ದೀನ್, ಆಲಂದಿಲ ಅಧ್ಯಕ್ಷ ಉಸ್ಮಾನ್ ಹಾಜಿ, ಹಾಗೂ ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.