ಪಥ್ಯ ಮಾಡಿ ಆರೋಗ್ಯ ಕಾಪಾಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಉದಯ ಲಾಯಿಲ, ಉದಯ ಇಲೆಕ್ಟ್ರಿಕಲ್ಸ್, ಲಾಯಿಲ
ಉದಯ ಲಾಯಿಲ, ಉದಯ ಇಲೆಕ್ಟ್ರಿಕಲ್ಸ್, ಲಾಯಿಲ

ಆರೋಗ್ಯವಂತ ವಾಗಿರಬೇಕೆಂದು ಎಲ್ಲರೂ ತಮ್ಮ ದಿನಚರಿಯಲ್ಲಿ ಶಿಸ್ತು ಬದ್ಧವಾಗಿ ಆಹಾರವನ್ನು ಬಳಸಿಕೊಳ್ಳುತ್ತಾರೆ. ಸಮತೋಲಿತ ಆಹಾರವನ್ನು ಸೇವಿಸಿದಾಗ ದೇಹ ಸದೃಢವಾಗಿ ಕಾಪಾಡಲು ಸಾಧ್ಯವಾಗುತ್ತದೆ. ಇಂದು ಬದಲಾದ ಜೀವನ ಶೈಲಿಯಿಂದ ಮನುಷ್ಯನಿಗೆ ವಿವಿಧ ರೀತಿಯ ಕಾಯಿಲೆಗಳು ಬಾಧಿಸುತ್ತಿದ್ದು, ಆಹಾರ ಸೇವನೆಯ ಕ್ರಮದಲ್ಲಿ ಕೂಡಾ ಅನಿವಾರ್ಯತೆ ಕಂಡಿದೆ. ಇದರೊಂದಿಗೆ ಹವಾಮಾನ ವೈಪರೀತ್ಯಗಳು ಕೂಡಾ ಇದಕ್ಕೆ ಪೂರಕವಾಗಿ ಪಥ್ಯ ಮಾಡಬೇಕಾದ ಅವಶ್ಯಕತೆ ಇದೆ.

ನಮ್ಮ ದೇಹದಲ್ಲಿ ಅಗತ್ಯಕ್ಕನುಗುಣವಾಗಿ ಸೇವಿಸುವ ಆಹಾರದಲ್ಲಿ ಪಥ್ಯವೂ ಕೂಡಾ ಮಹತ್ವದ್ದಾಗಿದೆ. ಕಾಯಿಲೆ ಬಿದ್ದಾಗ ಪಥ್ಯ ಮಾಡಬೇಕಾದದ್ದು ಅವಶ್ಯವಿದೆ. ಉದಾಹರಣೆಗೆ ಮಧು ಮೇಹ ಕಾಯಿಲೆ ಇದ್ದಾಗ ಸಕ್ಕರೆ ಅಥವಾ ಸಿಹಿಯಾದ ಆಹಾರವನ್ನು ಸೇವಿಸುವಲ್ಲಿ ಜಾಗ್ರತೆ ವಹಿಸಬೇಕಾಗುತ್ತದೆ. ಈ ಕಾಯಿಲೆಯವರು ಅನ್ನ ಸೇವಿಸುವುದು ಕಡಿಮೆ ಮಾಡಿ ರಾಗಿ , ಸಜ್ಜೆ, ನವಣೆ , ಜೋಳ , ಊದಲು ಇತ್ಯಾದಿ ಸಿರಿ ಧಾನ್ಯಗಳಿಂದ ತಯಾರಾದ ಆಹಾರವನ್ನು ಸೇವಿಸಬಹುದು ಎನ್ನುತ್ತಾರೆ ತಜ್ಞ್ನ ವೈದ್ಯರು.
ಪಥ್ಯದೊಂದಿಗೆ ವ್ಯಾಯಾಮ ಹಾಗೂ ಯೋಗ ಕೂಡಾ ಆರೋಗ್ಯವಂತರಾಗಲು ಸುಲಭ ಉಪಾಯ ರಕ್ತದೊತ್ತಡ , ಹೃದಯ ಸಂಬಂದಿ ಕಾಯಿಲೆಗಳಿಗೆ ದೇಹ ದಂಡಿಸುವುದರಿಂದ ಉತ್ತಮ ನಡಿಗೆಯ ಮೂಲಕ ದೇಹದಲ್ಲಿ ಆಗುವ ಆರೋಗ್ಯದ ಏರು ಪೇರುಗಳನ್ನು ತಡೆಗಟ್ಟ ಬಹುದು ಎನ್ನುತ್ತದೆ ವೈದ್ಯ ಲೋಕ . ಪರಿಸರದಲ್ಲಿರುವ ಪ್ಲಾಸ್ಟಿಕ್ ಬಳಕೆಗಳು ಕೂಡಾ ಆರೋಗ್ಯ ಹಾಳು ಮಾಡಲು ಕೂಡಾ ಸಹಕಾರಿಯಾಗಿದೆ. ಇದರಿಂದ ಪ್ಲಾಸ್ಟಿಕ್ ಬಳಕೆ ಕೂಡಾ ನಿಷೇಧಿಸುವ ಮೂಲಕ ಆರೋಗ್ಯದ ಮೇಲಾಗುವ ಪರಿಣಾಮವನ್ನು ಪಥ್ಯ ಮಾಡಿದಂತೆ .
ಇತ್ತೀಚೆಗೆ ವೈದ್ಯಕೀಯ ಶಿಭಿರದಲ್ಲಿ ತಜ್ಞ್ನ ವೈದ್ಯರು ಅಭಿಪ್ರಾಯ ವ್ಯಕ್ತ ಪಡಿಸುವಾಗ ತುರ್ತು ಕೆಲಸದ ನಿಮಿತ್ತ ಇಂದು ಎಲ್ಲರೂ ತಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ನಡಿಗೆಯನ್ನು ಕಡಿಮೆ ಮಾಡಿ ವಾಹನಗಳಲ್ಲಿ ಓಡಾಟ , ಮೆಟ್ಟಲು ಹತ್ತುವ ಪ್ರಮೇಯ ಬಾರದೆ ಲಿಫ್ಟ್ ಗಳ ಮೂಲಕ ಸಾಗುತ್ತಾರೆ. ಸರಿಯಾದ ಸಮಯದಲ್ಲಿ ಆಹಾರ , ನೀರು ಸೇವನೆ ಇತ್ಯಾದಿಗಳು ಇಲ್ಲದಿರುವುದರಿಂದ ನಮ್ಮ ದೇಹದಲ್ಲಿ ಆರೋಗ್ಯ ಕೂಡಾ ಏರು ಪೇರು ಕಂಡು ನಿತ್ರಾಣವಾಗುತ್ತದೆ. ಸರಿಯಾದ ಪ್ರಾಯಕ್ಕನುಗುಣವಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಾಗಿರುವುದರಿಂದ ಇದು ಕೂಡಾ ಮಾನವನ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಪಥ್ಯ ಮಾಡಿ ಕಡಿಮೆ ಆಹಾರವನ್ನು ಸೇವಿಸಿದರೆ ಅದೂ ಕೂಡಾ ಸಮಸ್ಯೆ ಹಾಗಂತ ಹೆಚ್ಚು ಆಹಾರ ತಿಂದರೂ ಕೂಡಾ ಸಮಸ್ಯೆ ಡಯಟ್ ಹೆಸರಿನಲ್ಲಿ ಊಟ ತಿಂಡಿ ಬಿಟ್ಟು ಮಿತಿ ಮೀರಿ ಕೆಲಸ ಮಾಡಿದರೆ ನಿತ್ರಾಣವಾಗಿ ಕಾಯಿಲೆಗಳು ಒಂದಕ್ಕೊಂದು ಬದಲಾವಣೆಯಾಗುತ್ತದೆ. ಕಾಯಿಲೆ ಬಂದಾಗ ವೈದ್ಯರಲ್ಲಿ ಪರೀಕ್ಷೆ ಮಾಡಿಸಿ ಸೂಕ್ತ ಮಾರ್ಗದರ್ಶನದೊಂದಿಗೆ ಔಷಧಿಯನ್ನು ಸೇವಿಸಬೇಕು ಇಲ್ಲವಾದಲ್ಲಿ ತಜ್ಞ್ನ ವೈದ್ಯರಲ್ಲಿ ಪರಿಶೀಲಿಸಬೇಕು ಅದನ್ನು ಬಿಟ್ಟು ನಾವೇ ಸ್ವಯಂ ವೈದ್ಯರಾಗಿ ಔಷಧಿ ಅಂಗಡಿಯಿಂದ ಮದ್ದು ತಂದು ಸೇವಿಸುವುದು ಸರಿಯಾದ ಕ್ರಮವಲ್ಲ.
ಸರಿಯಾದ ಸಮಯದಲ್ಲಿ ಮದ್ದು- ಮಾತ್ರೆ- ಸಿರಪ್ ತೆಗೆದುಕೊಳ್ಳುವಾಗ ಅದಕ್ಕೆ ಅನುಗುಣವಾಗಿ ನೀರನ್ನೂ ಕುಡಿಯ ಬೇಕಾಗುತ್ತದೆ. ಪಥ್ಯ ಮಾಡುತ್ತೇನೆಂದು ಸ್ವಯಂ ವೈದ್ಯರಾಗಿ ವೈದ್ಯರ ಕ್ರಮವನ್ನು ಅನುಸರಿಸದಿದ್ದರೆ ಒಂದು ಕಾಯಿಲೆಯಿಂದ ಇನ್ನೊಂದು ಕಾಯಿಲೆಗೆ ಹೆಚ್ಚಿನ ಹಾನಿಯಾಗುವ ಸಂಭವ ಇರುತ್ತದೆ. ನಾವು ಆಗಾಗ ವಯಸ್ಸಿಗೆ ಅನುಗುಣವಾಗಿ ರಕ್ತದೊತ್ತಡ , ರಕ್ತ ಪರೀಕ್ಷೆ ಮಾಡಬೇಕಾಗುತ್ತದೆ.

ಪಥ್ಯದ ನಿಯಮಗಳನ್ನು ಪಾಲಿಸುವುದರಿಂದ ಕೆಲವು ಕಾಯಿಲೆಗಳು ಗುಣವಾಗಬಹುದು ಆಹಾರ ಕ್ರಮಗಳ ವ್ಯವಸ್ಥೆಗಳಿಂದ ಪಥ್ಯದ ಆಹಾರದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು . ಸಣ್ಣ ಸಣ್ಣ ಮಾದರಿಯ ಮನೆಯಲ್ಲಿಯೇ ಮಾಡಬಹುದಾದ ವ್ಯಾಯಾಮಗಳ ಮೂಲಕ ಆರೋಗ್ಯವನ್ನು ಗುಣಪಡಿಸಿಕೊಳ್ಳಬಹುದು. ನಮ್ಮ ದೈನಂದಿನ ಕಾರ್ಯಗಳ ಒತ್ತಡಗಳಿಂದ ಬಳಲಿಕೆಯನ್ನು ಕಡಿಮೆಮಾಡಲು ಪಥ್ಯ ಅಗತ್ಯವಿದೆ. ಹಾಗೆಯೇ ದೇಹದಲ್ಲಿ ಆರೋಗ್ಯ ಸಂಬಂಧಿ ಕಾಯಿಲೆಗಳು ಉಲ್ಬಣವಾದಾಗ ವೈದ್ಯರನ್ನು ಕಾಣದೆ ಸ್ವಯಂ ವೈದ್ಯರಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಕುಟುಂಬ ವೈದ್ಯರು ಅಥವಾ ತಜ್ಞ್ನ ವೈದ್ಯರನ್ನು ಕಂಡು ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು ಆರೋಗ್ಯ ರಕ್ಷಣೆ ಮಾಡುವುದರೊಂದಿಗೆ ಅಪಾಯವನ್ನು ದೂರ ಮಾಡುವುದು ದೇಹಕ್ಕೆ ಒಳ್ಳೆಯ ಬೆಳವಣಿಗೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.