ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾಪ್ತಾಹಿಕ ಸಂಪದ ಸ್ವಚ್ಛ ತಾ ಅಭಿಯಾನ ಕಾರ್ಯಕ್ರಮ

ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಭಿವೃದ್ಧಿ ಕಾರ್ಯ ಕ್ರಮ ಸಂಘಟನೆ ಮಾಡುವುದರಿಂದ ಅವರ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಲು ಅನುಕೂಲವಾಗುತ್ತದೆ ಎಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಹೇಳಿದರು.ಅವರು ಇಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು(ನ.7) ನಡೆದ, 3ನೇ ಸಾಪ್ತಾಹಿಕ ಸಂಪದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾಲ್ಕನೇ ವಾಡಿ೯ನ ಮೂರು ಮಾಗ೯ದ ಬಳಿ ಯಿಂದ ಕ್ಯಾಂಪ್ಕೋ ರಸ್ತೆ ಬದಿಯಲ್ಲಿ ಸಂಪೂರ್ಣ ವಾಗಿ ತ್ಯಾಜ್ಯ ವಿಲೇವಾರಿ ಮಾಡಿ ನೈಮ೯ಲ್ಯದ ವಾತಾವರಣ ನಿರ್ಮಾಣ ಮಾಡುವ ಮುಖಾಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗ್ರತಿ ಮೂಡಿ ಸಲಾಯಿತು.
ಸದಸ್ಯರಾದ ಶ್ರೀಮತಿ ರಜನಿ ಕುಡ್ವ, ಗೌರಿ, ಲೋಕೇಶ್, ಜನಾರ್ದನ ಕುಲಾಲ್, ಮಾಜಿ ಸದಸ್ಯ ವಿಶ್ವ ನಾಥ ನಾಯಕ್, ಮುಖ್ಯಾಧಿಕಾರಿ ಸುಧಾಕರ್ ಇಂಜಿನಿಯರ್ ಮಹಾವೀರ ಆರಿಗ, ಹಾಗೂ ಎಲ್ಲಾ ಸಿಬ್ಬಂದಿ ವರ್ಗ, ಸಾರ್ವಜನಿಕ ಬಂದು ಗಳು ಶ್ರಮದಾನ ಮಾಡುವ ಮುಖಾಂತರ ನಗರದ ಸೌಂದರ್ಯವನ್ನು ಕಾಪಾಡಿಕೊಂಡು ಬರಲು ಸಹಕರಿಸಿದರು.
ಇದನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಮುಂದುವರೆಸಿ ಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿ ಎಲ್ಲರಿಗೂ ವೆಂಕಟರಮಣ ಶರ್ಮ ಅಭಿನಂದನೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.