ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿ 2 ನೇ ವರ್ಷದ ವಾರ್ಷಿಕೋತ್ಸವ

ಆಧುನಿಕ ಜೀವನದೊಂದಿಗೆ ಭಜನೆ ಯಂತಹ ಧಾರ್ಮಿಕ ಕಾರ್ಯಗಳನ್ನು ಮೈಗೂಡಿಸಿಕೊಂಡಾಗ ಕುಟುಂಬದಲ್ಲಿ ವಿಭಜನೆ ಇಲ್ಲ: ಕೇಶವ ಬಂಗೇರ

ಕಳಿಯ : ಆಧುನಿಕ ಕಾಲದ ಜೀವನದಲ್ಲಿ ಮನುಷ್ಯರೂ ಭಕ್ತಿಯ ಪರಿಸರದಿಂದ ದೂರವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆಡಂಬರವಿಲ್ಲದೆ ಭಕ್ತಿ-ಶ್ರದ್ಧೆಯಿಂದ ಸಾಮೂಹಿಕವಾಗಿ ಸೇರಿ ಮಾಡುವ ಭಜನೆಯಿಂದ ಸಂಬಂಧಗಳು ಗಟ್ಟಿಯಾಗುತ್ತದೆ. ಹಾಗೂ ಭಜನಾ ಕಾರ್ಯಕ್ರಮದಂತಹ ಧಾರ್ಮಿಕ ಕಾರ್ಯಗಳನ್ನು ಮೈಗೂಡಿಸಿಕೊಂಡಾಗ ಕುಟುಂಬದಲ್ಲಿ ವಿಭಜನೆಗೆ ಸಾಧ್ಯ ವಿಲ್ಲ ಎಂದು ಮಂಗಳೂರು ಕುದ್ರೋಳಿ ಶ್ರೀ ಗುರು ನಾರಾಯಣ ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಹೇಳಿದರು.


ನ.3 ರಂದು ಕಳಿಯ ಗ್ರಾಮದ ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿಯ 2 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. ಪ್ರಗತಿಪರ ಕೃಷಿಕ ಸದಾಶಿವ ನೈಾಕ್ ಕೆ.ಪಿ. ಹೀರ್ಯ ಪೂರ್ವಾಹ್ನ ದೀಪ ಬೆಳಗಿಸುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೊಳ್ಳುಕಲ್ಲು ಭಜನಾ ಮಂಡಳಿ,ಕಳಿಯ ನೆಲ್ಲಿಕಟ್ಟೆ ಮಂಜುನಾಥೇಶ್ವರ, ನ್ಯಾಯತರ್ಪು ರಕ್ತೇಶ್ವರಿ ಪದವು ಮಂಜುನಾಥೇಶ್ವರ ಭಜನಾ ಮಂಡಳಿ ಮತ್ತು ನಾಳ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.
“ದೇವಿ ಕೃಪಾ”ಪೆಲತ್ತಳಿಕೆ ಶ್ರೀಮತಿ ಗುಣವತಿ ಕೆ.ಎನ್.ಗೌಡರ ಮನೆಯಂಗಳದಲ್ಲಿ ಸಭಾ ಕಾರ್ಯಕ್ರಮ ಜರಗಿತು. ಭಜನಾ ಮಂಡಳಿ ಅಧ್ಯಕ್ಷ ವಿನೋದ್ ಗೌಡ ಹೀರ್ಯ ವಹಿಸಿದ್ದರು. ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು,ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಮೇಲ್ವಿಚಾರಕ ರಾಜೇಶ್ ಪಿ, ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ತು ಕಾರ್ಯದರ್ಶಿ ಜನಾರ್ದನ,ಶ್ರೀ. ದು. ಭ.ಮಂ.ಗೌರವಾಧ್ಯಕ್ಷ ಸೇಸಪ್ಪ ಕಂಗಿನಡೆ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ವಿಶೇಷ ಪ್ರಾಯೋಜಕರನ್ನು ಮುಖ್ಯ ಅತಿಥಿ ವಸಂತ ಮಜಲು ಶಾಲು ಹೊದಿಸಿ ವೇದಿಕೆಯಲ್ಲಿ ಗೌರವಿಸಿದರು.ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಬೇಬಿ ಸತ್ಯ ಶ್ರೀ,ಬೇಬಿ ತೃಪ್ತಿ,ಬೇಬಿ ಸಮೀಕ್ಷಾ ಪ್ರಾರ್ಥನೆ ಮಾಡಿದರು.ಸದಸ್ಯ ಜಗದೀಶ್ ಗೌಡ ಹೀರ್ಯ ಸ್ವಾಗತಿಸಿ,ಕಾರ್ಯದರ್ಶಿ ದಿನೇಶ್ ಗೌಡ ಕಲ್ಕುರ್ಣಿ ಗತ ವರ್ಷದ ವರದಿ ವಾಚಿಸಿ,ಗೌರವ ಸಲಹೆಗಾರ ಡಾಕಯ್ಯ ಗೌಡ ಹೀರ್ಯ ಕಾರ್ಯಕ್ರಮ ನಿರೂಪಿಸಿ,ಸದಸ್ಯ ಶರತ್ ಕಂಗಿನಡೆ ವಂದಿಸಿದರು,

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.