ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಸಾವು

Advt_NewsUnder_1
Advt_NewsUnder_1

ವೇಣೂರು: ಆನೆಕಾಲುವಿನಂತಹ ರೋಗಕ್ಕೆ ತುತ್ತಾಗಿ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದ್ದ ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ವಿದ್ಯಾರ್ಥಿನಿ ಶುಕ್ರವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾಳೆ.
ವೇಣೂರು ಬಜಿರೆ ಗ್ರಾಮದ ಮುದ್ದಾಡಿ ನಿವಾಸಿ ನಾರಾಯಣ ದೇವಾಡಿಗ ಮತ್ತು ಶಕುಂತಳ ದಂಪತಿ ಪುತ್ರಿ, ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿನಿ ರಮ್ಯಾ ದೇವಾಡಿಗ (19) ಅಕಾಲಿಕವಾಗಿ ಸಾವನ್ನಪ್ಪಿದ ದುರ್ದೈವಿ. ಅತ್ಯುತ್ತಮ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಈಕೆ ವೇಣೂರು ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸ್ಸೆಲ್ಸಿಯಲ್ಲಿ ಹಾಗೂ ಮೂಡಬಿದಿರೆ ಮಹಾವೀರ ಕಾಲೇಜಿನಲ್ಲಿ ಪಿಯುಸಿಯಲ್ಲೂ ಡಿಸ್ಟಿಕ್ಷನ್‌ನಲ್ಲಿ ಉತ್ತೀರ್ಣಳಾಗಿದ್ದಳು.

ಆಳ್ವಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಳು. 3 ವರ್ಷದ ಬಾಲ್ಯದಲ್ಲಿ ಕಾಲಿನಲ್ಲಿ ಕಾಣಿಸಿಕೊಂಡ ಸಣ್ಣಸೋವು ಬಳಿಕ ಕಾಲು ಊತುಕೊಳ್ಳಲು ಪ್ರಾರಂಭಿಸಿತು. ಮಂಗಳೂರು, ಉಡುಪಿ, ಮೈಸೂರು, ಕಾಸರಗೋಡು ಸೇರಿದಂತೆ ವಿವಿಧ ಕಡೆಗಳಲ್ಲಿ ವೈದ್ಯರಲ್ಲಿ ತೋರಿಸಿದರೂ ರೋಗವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ದೀರ್ಘಕಾಲದ ಚಿಕಿತ್ಸೆಯ ಹೊರತಾಗಿಯೂ ನಿಧಾನವಾಗಿ ಎರಡೂ ಕಾಲುಗಳು ಆನೆಕಾಲು ರೋಗದಂತೆ ಊದುಕೊಂಡಿತ್ತು. ಅನಾರೋಗ್ಯದ ಮಧ್ಯೆಯೂ ಕಾಲಿಗೆ ಬೆಲ್ಟ್ ಧರಿಸಿ ಶಾಲೆ, ಕಾಲೇಜು ಪೂರೈಸಿ ಶೈಕ್ಷಣಿಕವಾಗಿ ಸಾಧನೆ ಮೆರೆದಿದ್ದಳು. ತೀರಾ ಬಡ ಕುಟುಂಬವಾಗಿದ್ದ ಈಕೆಯ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವಂತೆ ಪತ್ರಿಕೆಯೂ ವರದಿ ಮಾಡಿ ದಾನಿಗಳ ಗಮನ ಸೆಳೆದಿತ್ತು. ಹಲವು ಸಂಘ ಸಂಸ್ಥೆಗಳು, ದಾನಿಗಳು ಆರ್ಥಿಕ ಸಹಾಯ ನೀಡಿದ್ದರು. ಆದರೆ ವಿದಿಯಾಟ ಬೇರೆಯೇ ಆಗಿತ್ತು. ಮೃತಳು ತಂದೆ-ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾಳೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.