HomePage_Banner_
HomePage_Banner_

‘ಭಾರ್ಗವಿ ಟ್ರೋಫಿ’ ದ.ಕ. ಜಿಲ್ಲಾ ಮಟ್ಟದ ಪುರುಷರ ಕಬ್ಬಡ್ಡಿ ಪಂದ್ಯಾಟ

ಪಣೆಜಾಲು: ಭಾರ್ಗವಿ ಪ್ರೆಂಡ್ಸ್, ಗುರುವಾಯನಕೆರೆ ಮತ್ತು ಓಂಕಾರ ಯುವಕ ಮಂಡಲ ರತ್ನಗಿರಿ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೊಸಿಯೇಶನ್ ಇದರ ಸಹಭಾಗಿತ್ವದಲ್ಲಿ ದ.ಕ ಜಿಲ್ಲಾ ಮಟ್ಟದ 60ಕೆ.ಜಿ ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ‘ಭಾರ್ಗವಿ ಟ್ರೋಫಿ-2019ನ.3 ರಂದು ಪಣೆಜಾಲು ಸ್ಟಾರ್ ಯುವಕ ಮಂಡಲ ಕ್ರೀಡಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೊಜಪ್ಪಾಡಿ ಶ್ರೀ ನಾಗಬ್ರಹ್ಮ ಸನ್ನಿಧಿ ಅಧ್ಯಕ್ಷ ಕೆ.ಎನ್.ಆನಂದ ಶೆಟ್ಟಿ ನೆರವೇರಿಸಿದರು. ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಕೆ.ವಿ.ಪೂವಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕುವೆಟ್ಟು ಗ್ರಾ.ಪಂ ಉಪಾಧ್ಯಕ್ಷೆ ಅಕ್ಷತಾ ಕೆ ಶೆಟ್ಟಿ, ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲದ ಉಪಾಧ್ಯಕ್ಷ ಶೇಖರ ಕುಲಾಲ್ ಉಪಸ್ಥಿತರಿದ್ದರು. ನಂತರ ವಿವಿಧ ತಂಡಗಳಿಂದ ಕಬಡ್ಡಿ ಪಂದ್ಯಾಟ ನಡೆಯಿತು.


ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಳಂಜ ಯುವ ಉದ್ಯಮಿ ಅಶ್ವತ್ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದು, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾ.ಪಂ. ಸದಸ್ಯ ವಿಶ್ವೇಶ್ ಕಿಣಿ, ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲದ ಅಧ್ಯಕ್ಷ ಯತೀಶ್ ಸಿರಿಮಜಲು, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ತಾಲೂಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್, ಗುರುವಾಯನಕೆರೆ ಅಕ್ಷಯ ಎಲೆಕ್ಟ್ರಿಕಲ್ಸ್‌ನ ಪುರಂದರ ಶೆಟ್ಟಿ, ಕಟ್ಟದಬೈಲು ಓಂ ಫ್ರೆಂಡ್ಸ್ ಅಧ್ಯಕ್ಷ ಸದಾಶಿವ ಸಾಲಿಯಾನ್, ಶಕ್ತಿ ಯುವಕ ಮಂಡಲ ಅಧ್ಯಕ್ಷ ಸುಧೇಶ್ ಆರ್ ಗೌಡ, ಸಂತೋಷ್ ಭಾರ್ಗವಿ, ಫ್ರಾನ್ಸಿಸ್ ಮಡಂತ್ಯಾರು, ಮತ್ತಿತರ ಗಣ್ಯರು ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.