ಬೆಳ್ತಂಗಡಿ ಗಾಣಿಗ ಸಮುದಾಯ ಭವನ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಫಲಿಗರ ಸಂಘದ ವತಿಯಿಂದ ಲಾಯಿಲ ಗ್ರಾಮದ ಕಕ್ಕೆನ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಸಂಘದ ನೂತನ ಕಟ್ಟಡ ಗಾಣಿಗ ಸಮುದಾಯ ಭವನದ ಉದ್ಘಾಟನಾ ಸಮಾರಂಭವು ನ.3 ರಂದು ಜರುಗಿತು.


ಉಜಿರೆ ಲಕ್ಷ್ಮೀ ಗ್ರೂಪ್ಸ್‌ನ ಲೀಲಾ ರವರು ನೂತನ ಸಭಾಭವನದ ಉದ್ಘಾಟನೆಯನ್ನು ನೆರವೇರಿಸಿ, ಶುಭ ಹಾರೈಸಿದರು. ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಫಲಿಗರ ಸಂಘದ ಅಧ್ಯಕ್ಷ ಲಕ್ಷ್ಮಣ ಸಫಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಸಮಾರಂಭದಲ್ಲಿ ದೀಪ ಪ್ರಜ್ವಲನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ , ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಫಲಿಗರ ಸಂಘದ ಗೌರವಾಧ್ಯಕ್ಷ, ತುಮಕೂರು ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಪ್ರಭಾಕರ, ದ.ಕ ಜಿಲ್ಲಾ ಗಾಣಿಗರ ಯಾನೆ ಸಫಲಿಗರ ಸಂಘದ ಅಧ್ಯಕ್ಷ ತಾರಾನಾಥ ಸುವರ್ಣ, ದಿ ಕರಾವಳಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎ.ಎಸ್ ವೆಂಕಟೇಶ್, ಬೆಂಗಳೂರಿನ ಉದ್ಯಮಿ ತ್ರಿವಿಕ್ರಮ, ಮಂಗಳೂರು ಗಾಣಿಗರ ಯಾನೆ ಸಫಲಿಗರ ಸಂಘದ ಅಧ್ಯಕ್ಷ, ಗಾಣರತ್ನ ಪ್ರಶಸ್ತಿ ಪುರಸ್ಕೃತ ಕೆ.ನಾರಾಯಣ ಸಫಲ್ಯ, ಬಂಟ್ವಾಳ ಗಾಣಿಗರ ಯಾನೆ ಸಫಲಿಗರ ಸಂಘದ ಅಧ್ಯಕ್ಷ ರಘು ಸಫಲ್ಯ, ತಾ.ಪಂ. ಸದಸ್ಯರಾದ ಧನಲಕ್ಷ್ಮೀ ಜನಾರ್ದನ್, ಸುಧಾಕರ, ಮಲವಂತಿಗೆ ಗ್ರಾ.ಪಂ ಅಧ್ಯಕ್ಷ ನಾರಾಯಣ ಪಾಠಾಳಿ, ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಬೆಳ್ತಂಗಡಿ ತಾಲೂಕು ಯುವ ಗಾಣಿಗ ವೇದಿಕೆ ಅಧ್ಯಕ್ಷ ಬಿ.ತುಕಾರಾಮ್.ಬಿ, ತಾಲೂಕು ಮಹಿಳಾ ಗಾಣಿಗ ವಿಭಾಗದ ಗೌರವಾಧ್ಯಕ್ಷೆ ಇಂದಿರಾ ಪ್ರಿಯದರ್ಶಿನಿ, ತಾಲೂಕು ಗಾಣಿಗರ ಯಾನೆ ಸಫಲಿಗರ ಸಂಘದ ಉಪಾಧ್ಯಕ್ಷರುಗಳಾದ ಬಿ. ಕೇಶವ ಧರ್ಮಸ್ಥಳ, ಜಯರಾಮ ಓಡದಕರಿಯ, ಕಾರ್ಯದರ್ಶಿ ಜಯಕುಮಾರ್, ಜೊತೆ ಕಾರ್ಯದರ್ಶಿ ಸದಾಶಿವ, ಕೋಶಾಧಿಕಾರಿ ಗಣೇಶ್ ಕನ್ನಾಜೆ, ಗೌರವ ಸಲಹೆಗಾರರಾದ ನಾರಾಯಣ ಸಫಲ್ಯ, ಮಂಜಪ್ಪ ಸಫಲ್ಯ, ಸುಂದರ್ ಸಂಧ್ಯಾ ಸ್ಟುಡಿಯೋ ಬೆಳ್ತಂಗಡಿ ಹಾಗೂ ಪದಾಧಿಕಾರಿಗಳು, ಸರ್ವಸದಸ್ಯರು, ಗಾಣಿಗ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಫಲಿಗರ ಸಂಘದ ಸ್ಥಾಪಕಾಧ್ಯಕ್ಷ ಸೂರಪ್ಪ ಗಾಣಿಗ, ಗಾಣಿಗ ಸಮುದಾಯದ ನಿಸ್ವಾರ್ಥ ಸೇವೆಗೈದ ಕಾಶಿಬೆಟ್ಟು ಹೊಸಕುಮೇರು ಸೋಮಯ್ಯ ಸಫಲ್ಯ, ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸೌಜನ್ಯ, ಪೆನ್ಸಿಲ್‌ಆರ್ಟ್ ವರ್ಲ್ಡ್ ರೆಕಾರ್ಡ್ ಸಾಧಕ ಪರೀಕ್ಷಿತ್ ನೆಲ್ಯಾಡಿ, ಸಮಾಜ ಸೇವಕ ಮೋಹನ್ ಕುಮಾರ್ ಉಜಿರೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಂಕರ ಸಫಲ್ಯ ಇವರನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖ ಗಾಣಿಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.