HomePage_Banner_
HomePage_Banner_
HomePage_Banner_

ಗುರುವಾಯನಕೆರೆ ತುಳು ಪ್ರತಿಭಾ ಪುರಸ್ಕಾರ ಪ್ರಧಾನ

Advt_NewsUnder_1

ಗುರುವಾಯನಕೆರೆ: ತುಳುಕೂಟ ಕುಡ್ಲ ಮಂಗಳೂರು ಹಾಗೂ ನಮ್ಮೂರ ಸ.ಪ್ರೌ.ಶಾಲೆ ಗುರುವಾಯನಕೆರೆ ಇದರ ಸಹಯೋಗದಲ್ಲಿ ತುಳು ಪ್ರತಿಭಾ ಪುರಸ್ಕಾರ ಪ್ರಧಾನ-2019 ಉದ್ಘಾಟನಾ ಕಾರ್ಯಕ್ರಮವು ಗುರುವಾಯನಕೆರೆ ಪ್ರೌಢ ಶಾಲೆಯಲ್ಲಿ ಇಂದು (ನ.2)ರಂದು ಜರುಗಿತು.
ತುಳುಕೂಟ ಕುಡ್ಲದ ಅಧ್ಯಕ್ಷ  ಬಿ ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಪ್ರೆಸ್ ಕ್ಲಬ್ ಅಧ್ಯಕ್ಷ ಉಜಿರೆ ಶ್ರೀ ಆರ್.ಎನ್. ಪೂವಾಜೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಜಿರೆ ಎಸ್.ಡಿ.ಎಮ್ ಶಾಲೆ ಪ್ರಾದ್ಯಾಪಕ ಡಾ| ದಿವಾ ಕೊಕ್ಕಡ, ಗುರುವಾಯನಕೆರೆ ಸ.ಪೌ.ಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ್ ಉಪಸ್ಥಿತರಿದ್ದರು.

ನಂತರ ಗುರುವಾಯನಕೆರೆ ಸ.ಪ್ರೌ.ಶಾಲಾ ವಿದ್ಯಾರ್ಥಿನಿ ಕು.ತೇಜಸ್ವಿನಿ ಕೆ ಹಾಗೂ ಮಂಗಳೂರು ಎಕ್ಸ್‌ಪರ್ಟ್ ಪ.ಪೂ.ಕಾಲೇಜು ವಿದ್ಯಾರ್ಥಿ ಮನೀಶ್ ಶ್ರೀರಾಮ್ ಇವರಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಯಿತು. ಗುರುವಾಯನಕೆರೆ ಪ್ರೌಢಶಾಲಾ ಶಿಕ್ಷಕ ಯೋಗೀಶ್ ನಾಯರ್ ಕಾರ್ಯಕ್ರಮವನ್ನು ನಿರೂಪಿಸಿದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.