HomePage_Banner_
HomePage_Banner_
HomePage_Banner_

ನ.15: ‘ಪ್ರ್ರತಿಷ್ಠಿತ ಕನ್ನಡ ಹಬ್ಬ’ ರಾಜ್ಯಮಟ್ಟದ ಕವಿಗೋಷ್ಠಿ

ಬೆಳ್ತಂಗಡಿ: ಎಕ್ಸ್ಸಲೆಂಟ್ ಮೂಡುಬಿದಿರೆ ಇದರ ವತಿಯಿಂದ ‘ಪ್ರತಿಷ್ಠಿತ ಕನ್ನಡ ಹಬ್ಬ’ ರಾಜ್ಯಮಟ್ಟದ ಕವಿಗೋಷ್ಠಿ ನ.15 ರಂದು ಜರುಗಲಿದ್ದು, ಆ ಪ್ರಯುಕ್ತ ಕವಿತೆಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ.
ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ವಯಸ್ಸಿನ ನಿರ್ಬಂಧವಿರುವುದಿಲ್ಲ ಹಾಗೂ ಕವಿತೆಗಳನ್ನು ಕಳುಹಿಸಲು ಸಂಖ್ಯೆಯ ಮಿತಿ ಇರುವುದಿಲ್ಲ. ಆದರೆ ಗೋಷ್ಠಿಗೆ ಒಂದು ಕವಿತೆಯನ್ನಷ್ಟೇ ಆಯ್ಕೆ ಮಾಡಲಾಗುವುದು. ಆಯ್ದ ಕವನಗಳಿಗೆ ಸಂಗೀತ ಸಂಯೋಜಿಸಿ, ಗಾಯನವನ್ನು ನಡೆಸಲಾಗುವುದು. ಯಾವುದೇ ಭಾವನೆಗಳಿಗೆ ಘಾಸಿಗೊಳಿಸುವಂತಹ ಬರಹಗಳಿಗೆ ಅವಕಶವಿರುವುದಿಲ್ಲ.
ವಿಜೇತರಿಗೆ ವಿಶೇಷ ಬಹುಮಾನವಿದ್ದು, ಗೋಷ್ಠಿಗೆ ಆಯ್ಕೆಯಾದ ಕವಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರ, ಪುಸ್ತಕ ಗೌರವ, ಪ್ರಯಾಣ ವೆಚ್ಚವನ್ನು ಒದಗಿಸಲಾಗುವುದು.
ಆಸಕ್ತರು ಕವಿತೆಗಳನ್ನು ಬರೆದು ನ.೫ರ ಒಳಗಾಗಿ ಕನ್ನಡ ವಿಭಾಗ, ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು, ಕಲ್ಲಬೆಟ್ಟು, ಮೂಡುಬಿದಿರೆ-574227, ದ.ಕ, ಈ ವಿಳಾಸಕ್ಕೆ ಅಥವಾ [email protected]ಗೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಡಾ. ನವೀನ್ ಕುಮಾರ್ ಮರಿಕೆ-9980990897, ರಾಮಕೃಷ್ಣ ಹೆಗಡೆ-9844099112; ಕಛೇರಿ-9900099653 ಸಂಖ್ಯೆಯನ್ನು ಸಂಪರ್ಕಿಸಬಹುದು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.