HomePage_Banner_
HomePage_Banner_

ಕೊಯ್ಯೂರು ಶ್ರೀ ವನದುರ್ಗಾ ದೇವಸ್ಥಾನ ಮಲೆಬೆಟ್ಟು: ಬ್ರಹ್ಮಕಲಶೋತ್ಸವ ಸಮಿತಿ ಆಯ್ಕೆ

ಕೊಯ್ಯೂರು: ಇಲ್ಲಿಯ ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ. 4ರಿಂದ 7ರವರೆಗೆ ನಡೆಯಲಿದ್ದು, ಬ್ರಹ್ಮಕಲಶೋತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರುಗಳಾಗಿ ಶಾಸಕ ಹರೀಶ್ ಪೂಂಜ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ, ಅಧ್ಯಕ್ಷರಾಗಿ ಅಶೋಕ್ ಭಟ್ ಕೊಯ್ಯೂರು, ಕಾರ್ಯಾಧ್ಯಕ್ಷರಾಗಿ ಸೀತಾರಾಮ ಶೆಟ್ಟಿ ಕೆಂಬರ್ಜೆ, ಪ್ರಧಾನ ಸಂಚಾಲಕರಾಗಿ ಬಾಲಕೃಷ್ಣ ಪೂಜಾರಿ ಕೊಯ್ಯೂರು, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ ಗೌಡ ಕೊಯ್ಯೂರು ಆಯ್ಕೆಯಾಗಿದ್ದಾರೆ.
ಉಳಿದಂತೆ ಕಾರ್ಯದರ್ಶಿಯಾಗಿ ರವೀಂದ್ರನಾಥ್ ಪೆರ್ಮುದೆ, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಗಾಂಜಾಲು, ಕೇಶವ ದೇವಸ, ಕೋಶಾಧಿಕಾರಿಯಾಗಿ ಗಣೇಶ್ ಭಟ್ ಕಾಂತಾಜೆ, ಉಪಾಧ್ಯಕ್ಷರುಗಳಾಗಿ ಸಂಜೀವ ಮಲೆಕುಡಿಯ ಕುಲ್ಲಾಜೆ, ಪ್ರವೀಣ್ ಕುಮಾರ್ ಮಾವಿನಕಟ್ಟೆ, ಜಿನ್ನಪ್ಪ ಪೂಜಾರಿ ದೇವಸ, ದಾಮೋದರ ಗೌಡ ಬೆರ್ಕೆ, ಗೌರವ ಸಲಹೆಗಾರರಾಗಿ ಎಂಎಲ್‌ಸಿ ಹರೀಶ್ ಕುಮಾರ್, ನ್ಯಾಯವಾದಿ ಪ್ರತಾಪಸಿಂಹ ನಾಯಕ್, ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ, ಪ್ರಚಂಡಬಾನು ಭಟ್ ಪಾಂಬೇಲು, ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಇವರುಗಳು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.