ಬೆಳ್ತಂಗಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಾರ

        ಬೇಲೋ… ನೊಬೆಲ್ಲೊ….?

ಅಕ್ರಮ ಹಣ ವರ್ಗಾವಣೆಯ ವಿಚಾರದಲ್ಲಿ 35  ದಿನ ನ್ಯಾಯಾಂಗ ಬಂಧನದಲ್ಲಿದ್ದ ಡಿ.ಕೆ ಶಿವಕುಮಾರ್ ಇದೀಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಅವರ ಬಿಡುಗಡೆಯ ಖುಷಿಯಲ್ಲಿ ಅವರ ಅಭಿಮಾನಿಗಳು ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ, 500 ಕೆ.ಜಿಯ ಸೇಬಿನ ಹಾರವನ್ನು ಹಾಕಿ ವಿಜೃಂಬಣೆಯಿಂದ ಬರಮಾಡಿಕೊಂಡರು.
ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದು ಡಿ.ಕೆ.ಶಿ ತಪ್ಪು ಮಾಡಿ ಜೈಲಿಗೆ ಹೋಗಿ ಬಂದದ್ದು ಅವರಿಗೆ ನೋಬೆಲ್ ಪ್ರಶಸ್ತಿ ಕೊಡಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅದು ಅಲ್ಲದೆ ಸಾವಿರಾರು ರೂಪಾಯಿ ಪಟಾಕಿ ಸಿಡಿಸಿದ್ದು, ಆಗ ಸುಮ್ಮನಿದ್ದು ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಸಿಡಿಸಿದಾಗ ಪರಿಸರ ಮಾಲಿನ್ಯದ ಬಗ್ಗೆ ಪ್ರಶ್ನೆ ಮಾಡುವ ಬುದ್ದಿ ಜೀವಿಗಳು ಈಗ ಎಲ್ಲಿದ್ದಾರೆ? ಲೀಟರ್‌ಗಟ್ಟಲೆ ಹಾಲನ್ನು ವ್ಯರ್ಥಮಾಡಿದಿರಲ್ಲ ಅದನ್ನು ಬಡವರಿಗೆ ಕೊಟ್ಟಿದ್ದರೆ ಅವರ ಹೊಟ್ಟೆಯಾದರೂ ತುಂಬುತ್ತಿತ್ತು ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಯಕ್ಷಗಾನ ಕಲಾವಿದರ ಅವಹೇಳನ- ವಿಷಾದ

ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರನ್ನು ಖಾಸಗಿ ವಾಹಿನಿಯೊಂದು ಸಂದರ್ಶನ ಮಾಡುತ್ತಿದ್ದ ವೇಳೆ ಆ ವಾಹಿನಿಯ ನಿರೂಪಕಿ ಯಕ್ಷಗಾನದವರಿಗೆ ಎಣ್ಣೇ ಹಾಕ್ಕೋಂಡ್ರೆನೆ ಡೈಲಾಗ್ ಬರುವುದು ಯಾಕೆ ಅಂತ ಅರ್ಥ ಆಗುವುದಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು ಆ ವಿಡಿಯೋ ಇದೀಗ ವೈರಲ್ ಆಗಿದೆ. ಮುಂದಿನ ಬೆಳವಣಿಗೆಯಲ್ಲಿ ವಾಹಿನಿಯ ಮುಖ್ಯಸ್ಥ ಸಾರ್ವಜನಿಕರಲ್ಲಿ ಕ್ಷಮೆ ಕೇಳಿದ್ದು ಈ ವಿಡಿಯೋ ಸಹ ವೈರಲ್ ಆಗಿದೆ

 

    ಪೊಲೀಸರ ಆಶೀರ್ವಾದ….! ?

ರಿಕ್ಷವೊಂದರಲ್ಲಿ ಪೊಲೀಸರ ಆಶೀರ್ವಾದ ಎಂದು ಚಾಲಕ ಬರೆದಿರುವ ಫೋಟೋ ಇದೀಗ ಎಲ್ಲೆಡೆ ಟ್ರೋಲ್ ಆಗಿದೆ. ಇದು ಪೊಲೀಸರು ಕೇಸು ಹಾಕದಿರಲಿ ಎಂದು ಬರೆಸಲಾಗಿದೆ. ಎಂದು ಬಹುತೇಕ ಮಂದಿ ಹಾಸ್ಯಭರಿತ ಕಮೆಂಟ್ ಮಾಡಿದ್ದಾರೆ. 

 

 

 

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.