ಜ್ಯೋತಿ ಆಸ್ಪತ್ರೆಯಲ್ಲಿ ಉಬ್ಬಿದ ರಕ್ತನಾಳ ಲೇಸರ್ ಚಿಕಿತ್ಸಾ ವೆರಿಕೋಸ್ ವೀನ್ ಯಂತ್ರ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಅತ್ಯಂತ ಕಡಿಮೆ ದರದಲ್ಲಿ ಖಚಿತವಾದ ಆರೋಗ್ಯ ಸೇವೆ ಒದಗಿಸುತ್ತಾ ಪ್ರಸಿದ್ಧಿ ಪಡೆದು ಯಶಸ್ವೀ ಹೆಜ್ಜೆಗಳನ್ನಿಡುತ್ತಿರುವ ಲಾಯಿಲ ಜ್ಯೋತಿ ಆಸ್ಪತ್ರೆಯಲ್ಲಿ ತಾಲೂಕಿನಲ್ಲೇ ಮೊದಲ ಬಾರಿಗೆ ತೆರೆದಿರುವ ‘ವೆರಿಕೋಸ್ ವೀನ್ಉಬ್ಬಿದ ರಕ್ತನಾಳ ಲೇಸರ್ ಚಿಕಿತ್ಸಾ ಯಂತ್ರದ ಉದ್ಘಾಟನೆ ಅ.30ರಂದು ಜರುಗಿತು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧಿಕಾರಿ ಬಿಷಪ್ ಲಾರೆನ್ಸ್ ಮುಕ್ಕುಯಿ ನೂತನ ಯಂತ್ರದ ಆಶೀರ್ವಾದ ವಿಧಿ ಪೂರೈಸಿದರು. ಉದ್ಘಾಟನೆಯನ್ನು ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಬಾಲಕೃಷ್ಣ ಭಟ್ ನೆರವೇರಿಸಿದರು.
ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಫಾ| ಜೋಸ್ ವಲಿಯಪರಂಬಿಲ್, ಲಾಯಿಲ ಗ್ರಾ.ಪಂ ಕಾರ್ಯದರ್ಶಿ ರೇಷ್ಮಾ, ತಾ.ಪಂ ಸಂಯೋಜಕ ಜಯಾನಂದ ಲಾಲ ಇವರು ಶುಭ ಕೋರಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಸಿ. ಸುಬಿನ್ ಜೋಸ್ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕಿ ಡಾ| ಸಿಸ್ಟರ್ ಅನುಜಾ ವಂದನಾರ್ಪಣೆಗೈದರು. ಜನರಲ್ ಸರ್ಜನ್ ಡಾ| ಸಿಸ್ಟರ್ ಅಂಗ್ರೇಪ್ ಪ್ರಸ್ತಾವನೆಗೈದರು. ಸಾರ್ವಜನಿಕ ಸಂಪರ್ಕಾಧಿಕಾರಿ ದಿವ್ಯಾ ಸೂರಜ್ ವಳಂಬ್ರ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.