ಬಾಲಕೃಷ್ಣ ಶೆಟ್ಟಿಗೆ ಡಾಕ್ಟರೇಟ್ ಪದವಿ

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಬಾಲಕೃಷ್ಣ ಶೆಟ್ಟಿ ಅವರಿಗೆ ಮಂಗಳೂರು ಯೆನಪೋಯ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರು ಯೆನಪೋಯ ಮೆಡಿಕಲ್ ಕಾಲೇಜಿನ ಪ್ರೊಪೆಸರ್ ಡಾ. ಮಂಜುಳಾ ಶಾಂತರಾಮ್ ಮಾರ್ಗದರ್ಶನದಲ್ಲಿ ಸಲ್ಲಿಸಿದ “ಅಧಿಕ ತೂಕ ಮತ್ತು ಸ್ಥೂಲಕಾಯ ತೊಂದರೆ ಇರುವವರಲ್ಲಿ ಯೋಗ ಚಿಕಿತ್ಸೆಯಿಂದ ಆಕ್ಸಿಡೇಟಿವ್ ಸ್ಟ್ರೆಸ್ ಮತ್ತು ಇತರ ಜೀವ ರಾಸಾಯನಿಕ ಪದಾರ್ಥಗಳ ಮೇಲೆ ಆಗುವ ಪರಿಣಾಮಗಳು- ತುಲನಾತ್ಮಕ ವೈದ್ಯಕೀಯ ಅಧ್ಯಯನ” ವನ್ನು ಮಂಡಿಸಿದ್ದರು.
ಇವರು ಗುರುವಾಯನಕೆರೆಯ ಹರ್ಮಾಡಿ ದಿ.ರಾಮಣ್ಣ ಶೆಟ್ಟಿ ಮತ್ತು ಮೀನಾಕ್ಷಿ ದಂಪತಿಯ ಪುತ್ರ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.